ನವದೆಹಲಿ: ಕರ್ನಾಟಕ ಪೋಲೀಸರ ವಿರುದ್ಧ ಅಬ್ದುಲ್ ನಾಸರ್ ಮದನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಕೇರಳಕ್ಕೆ ತೆರಳಲು ಭದ್ರತೆಗಾಗಿ ತಿಂಗಳಿಗೆ 20 ಲಕ್ಷ ರೂಪಾಯಿ ನೀಡುವಂತೆ ಪೆÇಲೀಸರ ಬೇಡಿಕೆಯ ವಿರುದ್ಧ ಮದನಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ. ತ್ರಿವೇದಿ ಪೀಠ ಹೇಳಿದೆ. ಇಷ್ಟು ಹಣ ಖರ್ಚು ಮಾಡಿ ಕೇರಳಕ್ಕೆ ಹೋಗಲಾಗದು ಎಂಬುದು ಮದನಿಯ ಪ್ರತಿಕ್ರಿಯೆ.
ಕರ್ನಾಟಕ ಭಯೋತ್ಪಾದನಾ ನಿಗ್ರಹ ದಳ ನೀಡಿದ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಬೆಂಗಳೂರು ನಗರ ಪೆÇಲೀಸ್ ಕಮಿಷನರ್ ಯತೀಶ್ ಚಂದ್ರ ನೇತೃತ್ವದ ತಂಡ ಕೇರಳಕ್ಕೆ ಭೇಟಿ ನೀಡಿ ಭದ್ರತಾ ವೆಚ್ಚದ ಬಗ್ಗೆ ಶಿಫಾರಸು ಸಿದ್ಧಪಡಿಸಿದೆ ಎಂದು ಸರ್ಕಾರ ತಿಳಿಸಿದೆ. ಭದ್ರತಾ ಬೆದರಿಕೆ ಮತ್ತು ಅಪಾಯದ ಆಧಾರದ ಮೇಲೆ ಮೊತ್ತವನ್ನು ಲೆಕ್ಕಹಾಕಲಾಗಿದೆ. ಕರ್ನಾಟಕ ಸರ್ಕಾರದ ಪ್ರಕಾರ ಆರು ಪೆÇಲೀಸರು ಮೂರು ಪಾಳಿಯಲ್ಲಿ ಒಂದೇ ಬಾರಿಗೆ ಮದನಿಗೆ ಭದ್ರತೆ ನೀಡಬೇಕಾಗುತ್ತದೆ.
ಕರ್ನಾಟಕ ಪರ ಹಾಜರಾದ ಅಡ್ವ. ಜನರಲ್ ನಿಖಿಲ್ ಗೋಯಲ್, ಮದನಿಯ ಪ್ರಯಾಣ ಅವರ ತಂದೆಯ ನಿವಾಸಕ್ಕೆ ಸೀಮಿತವಾಗಿಲ್ಲ ಮತ್ತು ಅವರು ಅನೇಕ ಸ್ಥಳಗಳಿಗೆ ಹೋಗುವ ಯೋಜನೆಯನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಭದ್ರತೆಗೆ ಒಬ್ಬ ಪೆÇಲೀಸರಿದ್ದು, ಕೇರಳಕ್ಕೆ ತೆರಳುವಾಗ ಮದನಿ ಜತೆಯಲ್ಲಿ ಇಪ್ಪತ್ತು ಪೆÇಲೀಸರು ಇರುತ್ತಾರೆ ಎಂದು ಮದನಿ ಪರ ವಕೀಲರು ತಿಳಿಸಿದರು. ಆದರೆ ರಾಜ್ಯದ ಹೊರಗೆ ಹೋದರೆ ಪರಿಸ್ಥಿತಿ ಭಿನ್ನವಾಗಲಿದೆ ಎಂದು ಪೀಠ ಹೇಳಿದೆ.





