HEALTH TIPS

ತ್ರಿಶೂರ್‍ನಲ್ಲಿ ಆರು ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ರಾಜಕೀಯ ಹತ್ಯೆಗಳು ಕೋಮು ಹತ್ಯೆಗಳು: ಇದರ ಹಿಂದಿರುವುದು ಭಯೋತ್ಪಾದಕ ಸಂಘಟನೆ

             ತಿರುವನಂತಪುರಂ: ತ್ರಿಶೂರ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದ ಆರು ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ರಾಜಕೀಯ ಹತ್ಯೆಗಳು ನಿಜವಾಗಿ ಕೋಮು ಹತ್ಯೆಗಳು ಎಂದು ತಿಳಿದು ಬಂದಿದೆ.

           ತ್ರಿಶೂರ್ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆ ಇದರ ಹಿಂದೆ ಇದೆ. 1997ರ ತ್ರಿಶೂರ್ ರೈಲು ನಿಲ್ದಾಣದ ಸ್ಫೋಟ ಪ್ರಕರಣದ ತನಿಖೆಯು ಅಂತಿಮವಾಗಿ ಆರು ಕೋಮು ಕೊಲೆಗಳ ಹಿಂದಿನ ಸತ್ಯ ಬಿಚ್ಚಿಡಲು ಕಾರಣವಾಯಿತು.

          ಡಿಸೆಂಬರ್ 6 ರಂದು ತ್ರಿಶ್ಶೂರ್‍ನಲ್ಲಿ ನಡೆದ ರೈಲು ಬಾಂಬ್ ಸ್ಫೋಟದ ತನಿಖೆಯು ತ್ರಿಶೂರ್‍ನಲ್ಲಿ ನಡೆದ ಆರ್‍ಎಸ್‍ಎಸ್-ಬಿಜೆಪಿ ಕಾರ್ಯಕರ್ತರ ಹತ್ಯೆಗಳು ಕೇವಲ ರಾಜಕೀಯ ಕೊಲೆಗಳಲ್ಲ, ಆದರೆ ಉತ್ತಮವಾಗಿ ಯೋಜಿತ ಕೋಮು ಹತ್ಯೆಗಳು ಎಂದು ತಿಳಿದುಬಂದಿದೆ. ರೈಲು ಬಾಂಬ್ ಸ್ಫೋಟದ ಹಿಂದೆ ತಮಿಳುನಾಡು ಮೂಲದ ಅಲ್-ಉಮ್ಮಾ ಎಂಬ ಭಯೋತ್ಪಾದಕ ಗುಂಪು ಇರುವುದು ಪತ್ತೆಯಾಗಿದೆ. ಅದರ ಬೆನ್ನಿಗೇ, ಕೇರಳದಲ್ಲಿ ಆರ್‍ಎಸ್‍ಎಸ್-ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ತ್ರಿಶೂರ್ ಮೂಲದ ಭಯೋತ್ಪಾದಕ ಸಂಘಟನೆಯು ಪತ್ತೆಯಾಗಿದೆ. ತ್ರಿಶೂರ್ ಮೂಲದ ಜಮೀಯತುಲ್ ಇಶ್ ಹನಿಯಾ ಎಂಬ ಸಂಘಟನೆ ಆರು ಮಂದಿಯನ್ನು ಕೊಂದಿತ್ತು. ಕ್ರೈಂ ಬ್ರಾಂಚ್‍ನ ಭಯೋತ್ಪಾದನಾ ನಿಗ್ರಹ ದಳವು ಪ್ರಕರಣದ ತನಿಖೆ ನಡೆಸಿ ಇದನ್ನು ಪತ್ತೆಹಚ್ಚಿದೆ.

         ಇವು ತ್ರಿಶೂರ್ ಅನ್ನು ಬೆಚ್ಚಿಬೀಳಿಸಿದ ಕೋಮು ಕೊಲೆಗಳು ಮತ್ತು ರಾಜಕೀಯ ಕೊಲೆಗಳೆಂದು ಭಾವಿಸಲಾಗಿದೆ:

ವಾತನಪಲ್ಲಿ ರಾಜೀವ್ ಹತ್ಯೆ- 29 ಡಿಸೆಂಬರ್ 1995

ಮತಿಲಕಂ ಸಂತೋμï ಹತ್ಯೆ- ಆಗಸ್ಟ್ 10, 1996

ಪಾಲಕ್ಕಾಡ್ ಕೊಲ್ಲಂಗೋಡ್ ಮಣಿ ಹತ್ಯೆ- ಆಗಸ್ಟ್ 16, 1996

ಮಲಪ್ಪುರಂ ವಲಂಚೇರಿ ತಾಮಿ ಕೊಲೆ- ಆಗಸ್ಟ್ 23, 1996

ಮಾಲಾ, ಕೊಡುಂಗಲ್ಲೂರ್ ಮೋಹನಚಂದ್ರನ್ ಹತ್ಯೆ - 14 ಆಗಸ್ಟ್ 1996

ತೋಜಿಯೂರ್ ಸುನೀಲ್ ಕೊಲೆ- 4ನೇ ಡಿಸೆಂಬರ್ 1994

         ತ್ರಿಶೂರ್ ಜಿಲ್ಲೆಯ ಮುಲ್ಲಸ್ಸೆರಿಯ ಅಯೂಬ್ ತ್ರಿಶೂರ್ ರೈಲು ನಿಲ್ದಾಣ ಸ್ಫೋಟದ ಪ್ರಮುಖ ಆರೋಪಿ ಎಂದು ತಿಳಿದುಬಂದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ಆರೋಪಿ ತ್ರಿಶೂರ್‍ನ ಕರಾವಳಿ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿದೆ. ಬಯಲಾಗಿರುವ ಇನ್ನೊಂದು ಸತ್ಯ ಏನೆಂದರೆ - ತ್ರಿಶೂರ್ ನ ಕರಾವಳಿ ಪ್ರದೇಶಗಳಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದೆ. ಈ ಭಯೋತ್ಪಾದಕ ಚಟುವಟಿಕೆಗಳ ಹಿಂದೆ 1992ರಲ್ಲಿ ರಚನೆಯಾದ ಜಮಿಯತ್-ಉಲ್-ಇಶಾನಿಯಾ ಕೈವಾಡವಿರುವುದು ಕೂಡ ಪತ್ತೆಯಾಗಿದೆ.

          ಇದರೊಂದಿಗೆ ರಾಜಕೀಯ ಕೊಲೆಗಳೆಂದು ಬರೆದುಕೊಂಡಿದ್ದ ಆರು ಕೊಲೆಗಳು ಈ ಸಂಘಟನೆ ನಡೆಸಿದ ಕೋಮು ಕೊಲೆಗಳೆಂದು ತಿಳಿದುಬಂದಿದೆ. ಎಂಟು ಜನರು ಈ ಗುಂಪಿನ ಬೆನ್ನೆಲುಬು. ಮುಖ್ಯ ಯೋಜನಾಧಿಕಾರಿ ಸೀತಲವಿ ಅನ್ವರಿ ಸೇರಿದಂತೆ ನಾಲ್ವರು ಇದೀಗ ವಿದೇಶಕ್ಕೆ ತೆರಳಿದ್ದಾರೆ.

          1998 ರಲ್ಲಿ ಸೀತಲವಿ ಅನ್ವರಿ ಮತ್ತು ಅವರ ಸ್ನೇಹಿತರು ಮುಂಬೈ ವಿಮಾನ ನಿಲ್ದಾಣದ ಮೂಲಕ ದುಬೈ ಪ್ರವೇಶಿಸಿದರು. ತ್ರಿಶೂರ್ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆಸಿದ ಅಯೂಬ್ ದುಬೈ ಪ್ರವೇಶಿಸಿದ್ದ ಎಂದು ಶಂಕಿಸಲಾಗಿದೆ. ಅವರು ನಕಲಿ ಪಾಸ್ ಪೋರ್ಟ್‍ನಲ್ಲಿ ನಮೂದಿಸಿದ್ದಾನೆ. ಆದರೆ ಅಯೂಬ್ ದುಬೈಗೆ ದಾಟಿ ಬಂದಿರುವುದಾಗಿ ಸುದ್ದಿ ಹಬ್ಬಿಸಿ ಕರಾವಳಿ ಪ್ರದೇಶದಲ್ಲಿ ನೆಲೆಸಿರುವುದು ಪೆÇಲೀಸರಿಗೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹತ್ಯೆಗೀಡಾದ ಎಲ್ಲಾ ಆರು ವ್ಯಕ್ತಿಗಳು ತ್ರಿಶೂರ್‍ನ ಆಯಾ ಪ್ರದೇಶಗಳಲ್ಲಿ ಆರ್‍ಎಸ್‍ಎಸ್ ಅಥವಾ ಬಿಜೆಪಿಯ ಪದಾಧಿಕಾರಿಗಳಾಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries