ಕೊಚ್ಚಿ: ಅರಿಕೊಂಬನ್ ಮಿಷನ್‍ನಲ್ಲಿ ಭಾಗವಹಿಸಿದವರನ್ನು ಕೇರಳ ಹೈಕೋರ್ಟ್ ಅಭಿನಂದಿಸಿದೆ. ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಅವರು ಮಿಷನ್ ತಂಡದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿದರು.
ಪತ್ರದಲ್ಲಿ, ತಂಡದ ಸದಸ್ಯರು ಮಿಷನ್ ಅನ್ನು ಸುರಕ್ಷಿತವಾಗಿ ಮತ್ತು ಸಹಾನುಭೂತಿಯಿಂದ ಕಾರ್ಯಗತಗೊಳಿಸಿರುವುದು ಮಾನವೀಯ ಸೂಚಕವಾಗಿದೆ ಮತ್ತು ತಂಡಕ್ಕೆ ವೈಯಕ್ತಿಕ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದು ಹೈಕೋರ್ಟ್ ಹೇಳಿದೆ.
ಇದೇ ವೇಳೆ ಆನೆ ಮತ್ತೆ ಮರಳುವ ಸಾಧ್ಯತೆ ಇಲ್ಲವೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿತ್ತು. ಅರಿಕೊಂಬನ ಸಂಚಾರ ಮಾರ್ಗ(ಎಲಿಫೆಂಟ್ ಕಾರಿಡಾರ್) ತಮಿಳುನಾಡು ಭಾಗದ ಕಡೆಗಿದೆ ಎಂದು ಅರಣ್ಯ ಇಲಾಖೆ ಉತ್ತರ ನೀಡಿದೆ. ರೇಡಿಯೋ ಕಾಲರ್ ಮೂಲಕ ನಿಖರವಾಗಿ ನಿಗಾ ವಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕಣ್ಗಾವಲು ಬಲಗೊಳಿಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.





