ತಿರುವನಂತಪುರಂ: ಕೇರಳಕ್ಕೆ ಹೆಚ್ಚುವರಿಯಾಗಿ 8,323 ಕೋಟಿ ಸಾಲ ಪಡೆಯಲು ಕೇಂದ್ರ ಹಣಕಾಸು ಸಚಿವಾಲಯ ಅನುಮತಿ ನೀಡಿದೆ. ವಿದ್ಯುತ್ ವಲಯವನ್ನು ಸುಧಾರಿಸಲು ಈ ಮೊತ್ತವನ್ನು ನಿಗದಿಪಡಿಸಲಾಗಿದೆ.
ಕೇರಳ ಸೇರಿದಂತೆ 12 ರಾಜ್ಯಗಳಿಗೆ ಒಟ್ಟು 66,413 ಕೋಟಿ ಸಾಲ ಪಡೆಯಲು ಕೇಂದ್ರ ಅನುಮತಿ ನೀಡಿದೆ.
ಸಾಲದ ಮಿತಿಯನ್ನು ಕಡಿತಗೊಳಿಸಿದ ಕೇಂದ್ರವನ್ನು ಕೇರಳ ಈ ಹಿಂದೆ ಟೀಕಿಸಿತ್ತು. ಸಾಲದ ಮಿತಿ ಕಡಿತದಿಂದ ಆರ್ಥಿಕ ಬಿಕ್ಕಟ್ಟು ಉಲ್ಬಣಿಸಲಿದೆ ಎಂಬುದು ರಾಜ್ಯದ ವಾದವಾಗಿತ್ತು. ಇದರ ಬೆನ್ನಲ್ಲೇ ಇದೀಗ ಹೆಚ್ಚುವರಿ ಮೊತ್ತದ ಸಾಲ ಪಡೆಯಲು ರಾಜ್ಯಕ್ಕೆ ಕೇಂದ್ರ ಅನುಮತಿ ನೀಡಿದೆ.
15 ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ 2021-2024 ರವರೆಗೆ ಪ್ರತಿ ವರ್ಷ ರಾಜ್ಯ ಜಿಎಸ್‍ಟಿಯ 5 ಶೇ. ಸಾಲವನ್ನು ಪಡೆಯಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸಚಿವರು ಬಜೆಟ್‍ನಲ್ಲಿ ಘೋಷಿಸಿದ್ದರು. ಇದರ ಭಾಗವಾಗಿಯೇ ಮೊತ್ತ ಮಂಜೂರು ಮಾಡಲಾಗಿದೆ ಕೇಂದ್ರದ ವಿವರಣೆ.





