ತ್ರಿಶೂರ್: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಮಕ್ಕಳು ಶಾಲೆಯಿಂದ ಈ ಕರ್ತವ್ಯದ ಮೊದಲ ಪಾಠಗಳನ್ನು ಅನುಭವಿಸುತ್ತಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಇಂತದೇ ಗಮನಾರ್ಹ ಚಿತ್ರ.
ತ್ರಿಶೂರ್‍ನ ಕಂಜಿರಸೇರಿ ಗಾಂಧಿ ಸ್ಮಾರಕ ಲೋವರ್ ಪ್ರೈಮರಿ ಶಾಲೆಯ ನಾಯಕನಾಗಿ ಆಯ್ಕೆಯಾಗಿರುವ ಸೇತುಮಾಧವನ್ ಗಮನ ಸೆಳೆಯುತ್ತಿದ್ದಾನೆ.
ಶಾಲಾ ನಾಯಕನಾಗಿ ಆಯ್ಕೆಯಾದ ಕ್ಷಣದಲ್ಲಿ ಸೇತುಮಾಧವನ್ ನ ಸಂತಸದ ಪ್ರದರ್ಶನ ಇಡೀ ಕೇರಳೀಯರ ಮನಸೂರೆಗೊಂಡಿತು. ಸೇತುಮಾಧವನ್ ಕಲಿಯುತ್ತಿರುವುದು ನಾಲ್ಕನೇ ತರಗತಿಯಲ್ಲಿ.
ವಿದ್ಯಾರ್ಥಿಗಳು ಮತದಾನದ ಮೂಲಕ ಶಾಲಾ ನಾಯಕನÀನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಿದ ಸಂಭ್ರಮದ ಕ್ಷಣಗಳಲ್ಲಿ ಸೇತು ಮಾಧವನ್ ಕಣ್ಣಲ್ಲಿ ನೀರುತುಂಬಿಕೊಂಡಿರುವುದು ವೈರಲ್ ಆಗಿದೆ. ನಿರೀಕ್ಷೆಗೂ ಮೀರಿದ ಗೆಲುವಿನ ಖುಷಿಯಿಂದ ಕಣ್ಣೀರು ಬಂತೆಂದು ಸೇತುಮಾಧವನ್ ಪ್ರತಿಕ್ರಿಯಿಸಿದ್ದಾನೆ.
ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಕೂಡ ಫೇಸ್‍ಬುಕ್‍ನಲ್ಲಿ ಈ ಚಿತ್ರ ಹಂಚಿಕೊಂಡಿದ್ದಾರೆ. ಮಕ್ಕಳು ತಮ್ಮ ಶಾಲಾ ಜೀವನದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕಲಿಯಬೇಕು ಎಂದು ಅವರು ಪೋಸ್ಟ್‍ನಲ್ಲಿ ಬರೆದಿದ್ದಾರೆ. ಸೇತುಮಾಧವನ್ ಅವರ ಸಂತೋಷದ ಕ್ಷಣಗಳನ್ನು ಶಾಲಾ ಶಿಕ್ಷಕರ ಪೋನ್‍ನಲ್ಲಿ ಸೆರೆಹಿಡಿಯಲಾಗಿದೆ. ಸೇತುಮಾಧವನ್ ಇಂದು ಕೇರಳೀಯರ ಮನದಲ್ಲಿ ಅಚ್ಚಳಿಯದ ಉಳಿಯುವ ಮುಖವಾಗಿದ್ದಾನೆ. ಶಾಲಾ ಚುನಾವಣೆಯ ಯಶಸ್ಸು ವೈರಲ್ ಆಗಿರುವುದರಿಂದ ಶಿಕ್ಷಕರು ಮತ್ತು ಮಕ್ಕಳು ಸಂತಸಗೊಂಡಿದ್ದಾರೆ.





