HEALTH TIPS

90 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ! 42 ವರ್ಷಗಳ ಹಿಂದೆ ಆತ ಮಾಡಿದ್ದೇನು?

                       ಫಿರೋಜಾಬಾದ್ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಗುರುವಾರ 90 ವರ್ಷದ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ಗಂಗಾ ದಯಾಳ್‌ಗೆ 55 ಸಾವಿರ ರೂ. ದಂಡವನ್ನು ಕಟ್ಟುವಂತೆ ಆದೇಶಿಸಲಾಗಿದೆ.

                                42 ವರ್ಷಗಳ ಹಿಂದೆ ಗಂಗಾ ದಯಾಳ್ ಮಾಡಿದ್ದೇನು?

                  42 ವರ್ಷಗಳ ಹಿಂದೆ ನಡೆದ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಗಂಗಾ ದಯಾಳ್​, ಹಿಂದೆ ಒಟ್ಟು 10 ಜನ ದಲಿತರನ್ನು ಹತ್ಯೆ ಮಾಡಿದ್ದ. ಈ ಗಂಭೀರ ಪ್ರಕರಣದ ತೀರ್ಪು ಇದೀಗ ಹೊರ ಬಿದ್ದಿದೆ.

                 ಸರ್ಕಾರಿ ವಕೀಲರು ಹೇಳಿದ್ದೇನು?

              ಸರಕಾರಿ ವಕೀಲ ರಾಜೀವ್ ಉಪಾಧ್ಯಾಯ, '1981ರಲ್ಲಿ ಸದುಪುರ ಗ್ರಾಮದಲ್ಲಿ ಹಿಂಸಾಚಾರ ನಡೆದಿದ್ದು, 10 ಮಂದಿಯನ್ನು ನಿರ್ದಯವಾಗಿ ಕೊಂದಿದ್ದ. ಈ ಸಂದರ್ಭ ಇಬ್ಬರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಐಪಿಸಿಯ ಸೆಕ್ಷನ್ 302 ಮತ್ತು 307 ಅಡಿಯಲ್ಲಿ ದಾಖಲಿಸಲಾಗಿತ್ತು.

                 ಹೈಕೋರ್ಟ್ ಆದೇಶದ ಮೇರೆಗೆ ಫಿರೋಜಾಬಾದ್ ಜಿಲ್ಲೆ ರಚನೆಯಾದ ನಂತರ ಪ್ರಕರಣವನ್ನು ಫಿರೋಜಾಬಾದ್‌ಗೆ ವರ್ಗಾಯಿಸಲಾಯಿತು. ಜೀವಂತವಾಗಿರುವ ಏಕೈಕ ಆರೋಪಿ ಗಂಗಾ ಸಹಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು ₹ 55,000 ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಎಂದು ಹೇಳಿದ್ದಾರೆ.

                ಸಂತ್ರಸ್ತರಲ್ಲಿ ಒಬ್ಬರಾದ ಮಹಾರಾಜ್ ಸಿಂಗ್ ಅವರ ಸಂಬಂಧಿಯೊಬ್ಬರು, (ಘಟನೆಯ ಸಮಯದಲ್ಲಿ ಹುಟ್ಟಿರಲಿಲ್ಲ) ಅವರ ಹಿರಿಯರು ನೀಡಿದ್ದ ಮಾಹಿತಿಯಂತೆ 'ಕುಟುಂಬದ 4 ಸದಸ್ಯರು ಕೊಲ್ಲಲ್ಪಟ್ಟರು ಮತ್ತು ಅವರ ಚಿಕ್ಕಪ್ಪನ ನೆರೆಹೊರೆಯಲ್ಲಿ ಇತರ 6 ಮಂದಿಯನ್ನು ಸಹ ಕೊಲ್ಲಲಾಗಿತ್ತು' ಎಂದು ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries