ಪ್ರಾಣಿಗಳು ಮನುಷ್ಯರನ್ನು ನಂಬಿದರೆ ಮನೆ ಮಕ್ಕಳಂತೆ ನಡೆದುಕೊಳ್ಳುತ್ತವೆ. ಹೀಗೆ ಇಲ್ಲೊಂದು ಶ್ವಾನ ತನ್ನ ಮಾಲೀಕನೊಂದಿಗೆ ಕೆಲಸಕ್ಕೆ ಸಹಕರಿಸುತ್ತಾ ಮನೆಯ ಹಸುವಿಗಾಗಿ ತೋಟದಿಂದ ಹುಲ್ಲು ತರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
0
samarasasudhi
ಜೂನ್ 18, 2023
ಪ್ರಾಣಿಗಳು ಮನುಷ್ಯರನ್ನು ನಂಬಿದರೆ ಮನೆ ಮಕ್ಕಳಂತೆ ನಡೆದುಕೊಳ್ಳುತ್ತವೆ. ಹೀಗೆ ಇಲ್ಲೊಂದು ಶ್ವಾನ ತನ್ನ ಮಾಲೀಕನೊಂದಿಗೆ ಕೆಲಸಕ್ಕೆ ಸಹಕರಿಸುತ್ತಾ ಮನೆಯ ಹಸುವಿಗಾಗಿ ತೋಟದಿಂದ ಹುಲ್ಲು ತರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಕಿ ಎಂಬ ಈ ಹೆಸರಿನ ಕಪ್ಪು ಬಣ್ಣದ ಶ್ವಾನ ಮನೆ ಮಗನಂತೆ ಇದ್ದು ಮಾಲೀಕ ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಈ ಶ್ವಾನ ಇರುತ್ತದೆ. ಅಷ್ಟು ದೂರದಿಂದ ಹುಲ್ಲನ್ನು ಹೊತ್ತು ಮನೆಗೆ ಬರುತ್ತದೆ. ದೇವರನಾಡು ಕೇರಳದ ವೀಡಿಯೋ ಇದಾಗಿದೆ.
ವಿಡಿಯೋದಲ್ಲಿ ಏನಿದೆ?: ಮಾಲೀಕರ ಜತೆಗೆ ತೋಟಕ್ಕೆ ಹೋಗಿದ್ದ ಶ್ವಾನ, ಹುಲ್ಲಿನ ಕಟ್ಟನ್ನು ಹಲ್ಲಿನಲ್ಲಿ ಕಚ್ಚಿಕೊಂಡು ತಂದು, ಅದನ್ನು ದನದ ಕೊಟ್ಟಿಗೆಯ ಮುಂದೆ ಹಾಕುತ್ತದೆ. ಕೊನೆಗೆ ತಮ್ಮ ಮುದ್ದಿನ ಶ್ವಾನಕ್ಕೆ ಮನೆ ಮಾಲೀಕ ಪ್ರೀತಿಯ ಮುತ್ತನ್ನು ನೀಡುವ ಭಾವನಾತ್ಮಕ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು.