HEALTH TIPS

ಮಾಲಿವುಡ್​ನ ಹಾಸ್ಯ ನಟ ಪೂಜಾಪ್ಪುರ ರವಿ ಇನ್ನಿಲ್ಲ

                ತಿರುವನಂತಪುರಂಮಾಲಿವುಡ್​ನ ಹಿರಿಯ ನಟ ಪೂಜಾಪ್ಪುರ ರವಿ(ರವೀಂದ್ರನ್​ ನಾಯರ್​) ಭಾನುವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಡುಕ್ಕಿ ಜಿಲ್ಲೆಯ ಮರಾಯೂರಿನಲ್ಲಿರುವ ಅವರ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ.

              ಎನ್​.ಕೆ. ಆಚಾರಿ ಅವರ ಕಲಾನಿಲಯಂ ಎಂಬ ರಂಗಭೂಮಿ ತಂಡದಿಂದ ಗುರುತಿಸಿಕೊಂಡಿದ್ದ ರವೀಂದ್ರನ್​, 1976ರಲ್ಲಿ ಅಮ್ಮಿಣಿ ಅಮ್ಮಾವನ್​ ಚಿತ್ರದ ಮೂಲಕ ಮಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. 800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಅವರು ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ಧಾರೆ.

              2016ರಲ್ಲಿ ಬಿಡುಗಡೆಯಾದ ಗುಪ್ಪಿ ಚಿತ್ರದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು. ಮಲಯಾಳಂ ಸಿನಿ ಇಂಡಸ್ಟ್ರಿಯ ಬಹುತೇಕ ಕಲಾವಿದರ ಜೊತೆ ನಟಿಸಿದ್ದು, ಅವರ ನಿಧನಕ್ಕೆ ಮಾಲಿವುಡ್​ನ ನಟ-ನಟಿಯರು, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries