ಕಾಸರಗೋಡು: ಪ್ರಧಾಣಿ ನರೇಂದ್ರ ಮೋದಿ ನೇತೃಥ್ವದ ಸರ್ಕಾರದ ಒಂಬತ್ತನೇ ವರ್ಷಾಚರಣೆಯ ಅಂಗವಾಗಿ ನಡೆಯುವ 'ಸಂಪರ್ಕ್ ಸೆ ಸಮರ್ಥನ್' ಕಾರ್ಯಕ್ರಮದ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಕುಂಬಳೆ ಮಂಡಲದ ಕಲಾ, ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿರುವ ಗಣ್ಯರನ್ನು ಭೇಟಿ ಮಾಡಿದರು. ಬುಧವಾರ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕುಂಬಳೆ ಪಂಚಾಯತ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು, ನಂತರ ಕುಂಬಳೆಯಲ್ಲಿರುವ ಡಾ.ಎಂ.ರಾಮಕೃಷ್ಣ ಭಟ್ ಮತ್ತು ನಾರಾಯಣ ಚೆಂಬಲ್ತಿಮಾರ್ ಮನೆಗೆ ಭೇಟಿ ನೀಡಿದರು.
ಎಣ್ಮಕಜೆಯ ಎಂಡೋಸಲ್ಫಾನ್ ಪೀಡಿತ ವಿಕಲಚೇತನ ಮಕ್ಕಳು ಓದುತ್ತಿರುವ ನವಜೀವನ ಶಾಲೆಗೆ ಭೇಟಿ ನೀಡಿದರು. ಇತ್ತೀಚೆಗೆ ನಿಧನರಾದ ಬಿಜೆಪಿ ಕಾರ್ಯಕರ್ತ, ಕುದ್ವ ಸೆಟ್ಟಿಬೈಲ್ ನಿವಾಸಿ ಗೋಪಾಲ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನ ಸಂತೈಸಿದರು. ಎಣ್ಮಕಜೆಯ ಹಿರಿಯ ಬಿಜೆಪಿ ಮುಖಂಡ ಸದಾನಂದ ಮಾಸ್ಟರ್ ಕುದ್ವ ಅವರ ಮನೆಗೆ ಭೇಟಿ ನೀಡಿದರು. ಬಿಜೆಪಿ ಪುತ್ತಿಗೆ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಸೀತಾರಾಮ ಶೆಟ್ಟಿ ಹಾಗೂ ಇತ್ತೀಚೆಗೆ ನಿಧನರಾದ ಸಂಘಪರಿವಾರ ಕಾರ್ಯಕರ್ತ ಆನಂದ ಅವರ ಮನೆಗಳಿಗೆ ಭೇಟಿ ನೀಡಲಾಯಿತು. ಮಂಗಲ್ಪಾಡಿ ಪಂಚಾಯತಿಯ ಉಪ್ಪಳ ಶಾರದಾ ನಗರದಲ್ಲಿ ಸಮುದ್ರಕೊರೆತಕ್ಕೆ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿಯಲ್ಲಿನ ಲೋಪದೋಷದಿಂದ ಕರಾವಳಿನಿವಾಸಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ರೈ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಅಮೆಕ್ಕಳ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಅಂಜು ಜೋಸ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತಕುಮಾರ್ ಮಯ್ಯ, ಕೆ.ಪಿ.ಅನಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.





