ವಾಣೀನಗರ ಪ್ರಿ-ಮೆಟ್ರಿಕ್ ಹಾಸ್ಟೆಲ್-ಭೋದಕರ ಹುದ್ದೆಗೆ 16ರಂದು ಸಂದರ್ಶನ
ಪೆರ್ಲ: ಜಿಲ್ಲಾ ಪರಿಶಿಷ್ಟ ವಿಭಾಗದಡಿ ಪೆರ್ಲ ಸನಿಹದ ವಾಣೀನಗರದಲ್ಲಿ ಕಾರ್ಯಾಚರಿಸುತ್ತಿರುವ ಪ್ರಿ-ಮೆಟ್ರಿಕ್ ಹಾಸ್ಟೆಲ್‍ನಲ್ಲಿ ಇಂಗ್ಲೀಷ್, ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ತಾತ್ಕಾಲಿಕ ಭೋಧಕರ ಹುದ್ದೆ ತೆರವಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಯೊಂದಿಗೆ ಜೂ.16ರಂದು ಬೆಳಗ್ಗೆ 10ಕ್ಕೆ ಪೆರ್ಲದಲ್ಲಿರುವ ಎಣ್ಮಕಜೆ ಟ್ರೈಬಲ್ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
ಬೇಕೂರು ಶಾಲೆಯಲ್ಲಿ ಶಿಕ್ಷಕ ಹುದ್ದೆಗೆ ಸಂದರ್ಶನ
ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಸಸ್ಯಶಾಸ್ತ್ರ (ಜೂನಿಯರ್) ಶಿಕ್ಷಕ ಹುದ್ದೆಗೆ ದಿನಕೂಲಿ ವೇತನದ ಆಧಾರದಲ್ಲಿ ನೇಮಕಾತಿಗಾಗಿ ಸಂದರ್ಶನ ಜೂ. 19ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಜರುಗಲಿದೆ. ಅಭ್ಯರ್ಥಿಗಳು ಅಸಲಿ ಅಂಕಪಟ್ಟಿ ಸಹಿತ ಪ್ರಾಂಶುಪಾಲರ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಗುವಂತೆ ಪ್ರಕಟಣೆ ತಿಳಿಸಿದೆ.




