ಉಪ್ಪಳ: ಮುಂಗಾರು ಮಳೆ ನಿಧಾನವಾಗಿರುವ ಮಧ್ಯೆ ಕಳೆದ ಎರಡು-ಮೂರು ದಿನಗಳಿಂದ ಮಳೆ ವ್ಯಾಪಕಗೊಳ್ಳುವ ಸೂಚನೆ ವ್ಯಕ್ತವಾಗಿದ್ದು, ಕಡಲ್ಕೊರೆತ ತೀವ್ರಗೊಂಡಿದೆ.
ಬಂದ್ಯೋಡು ಸಮೀಪದ ಚೆಲ್ಲಂಗೈ ಪ್ರದೇಶದ ಕಡಲು ವ್ಯಾಪ್ತಿಯಲ್ಲಿ ತೀವ್ರ ಸ್ವರೂಪ ಪಡೆದಿರುವ ಕಡಲಬ್ಬರದ ಕಾರಣ ನೂರಾರು ಗಾಳಿ ಮರಗಳು ಕಡಲ ಪಾಲಾಗಿದೆ. ಸಮುದ್ರ ಪರಿಸರದಲ್ಲಿ ಸಾಗುವ ರಸ್ತೆ ಸಮೀಪದ ವರೆಗೆ ಹೆದ್ದೆರೆಗಳು ಮಂಗಳವಾರ ಬೆಳಿಗ್ಗಿನಿಂದ ಬಂದು ಬಡಿಯುತ್ತಿದ್ದು, ರಸ್ತೆ ನಾಶವಾಗುವ ಸಾಧ್ಯತೆ ಇದೆ. ಪರಿಸರ ಪ್ರದೇಶದ ಅನೇಮ ಮನೆಗಳಿಂದ ಜನರನ್ನು ಸ್ಥಳಾಂತರಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ.




.jpg)
.jpg)
