ಮುಳ್ಳೇರಿಯ: ಮುಳಿಯಾರು ಗ್ರಾಮದ ಬಳ್ಳಮೂಲೆಯಲ್ಲಿ ಕಾಡಾನೆಗಳ ಹಿಂಡು ವ್ಯಾಪಕ ಕೃಷಿ ನಾಶಗೊಳಿಸುವ ಮೂಲಕ ಭಾರೀ ಕಷ್ಟನಷ್ಟಕ್ಕೆ ಕಾರಣವಾಗಿದೆ. ಸೋಮವಾರ ಸಂಜೆ ಬೇಪು ಶಾಲೆಯ ಸಮೀಪವಿದ್ದ ಕಾಡಾನೆಗಳು ಬೆಳ್ಳಿಪ್ಪಾಡಿ ರಸ್ತೆಯ ಮೇಲ್ಭಾಗದ ಮೂಲಕ ಬಳ್ಳಮೂಲೆಗೆ ಆಗಮಿಸಿ ಬಿ.ಗೋಪಾಲಕೃಷ್ಣ ಭಟ್ ಎಂಬವರಿಗೆ ಸೇರಿದ ಬಾಳೆ, ಕಾಳುಮೆಣಸು ಇತ್ಯಾದಿ ಬೆಳೆಗಳನ್ನು ನಾಶಪಡಿಸಿದೆ. ಮಂಗಳವಾರವೂ ಆನೆಗಳು ಅದೇ ಸ್ಥಳದಲ್ಲಿ ಬೀಡುಬಿತ್ತಿದೆ ಎಂಬ ಮಾಹಿತಿ ಇದೆ. ಬೆಳ್ಳಿಪ್ಪಾಡಿ, ಬಳ್ಳಮೂಲೆ ಭಾಗದ ಜನವಸತಿ ಪ್ರದೇಶಗಳಿಗೆ ಯಾವುದೇ ಸಮಯದಲ್ಲಿ ಆನೆಗಳು ನುಗ್ಗುವ ಪರಿಸ್ಥಿತಿ ಕಳವಳ ಮೂಡಿಸಿದೆ.
ಕಾಡಾನೆಗಳನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಮಧುವಾಹಿನಿ ಗ್ರಂಥಾಲಯದ ಕಾರ್ಯಕಾರಿ ಸಮಿತಿ ಅಧಿಕೃತರನ್ನು ಒತ್ತಾಯಿಸಿದೆ.




.jpg)

.jpg)
.jpg)
.jpg)
