ಕಾಸರಗೋಡು: ದೇವಸ್ಥಾನಗಳು ಯಾವತ್ತೂ ಸರ್ಕಾರದ ಸೊತ್ತಲ್ಲ. ದೇವಸ್ಥಾನಗಳು ಭಕ್ತರ ಸೊತ್ತು. ಈ ಮೂಲಕ ದೇವಸ್ಥಾನಗಳು ಕೇವಲ ಶ್ರದ್ಧಾ ಕೇಂದ್ರಗಳಾಗಿ ಮಾತ್ರವಲ್ಲ. ಶಿಕ್ಷಣ ಕ್ಷೇತ್ರಗಳಾಗಿ, ಜ್ಞಾನ ಕೇಂದ್ರಗಳಾಗಿ ಬದಲಾಗಬೇಕು ಎಂದು ಆರ್.ಎಸ್.ಎಸ್. ಅಖಿಲ ಭಾರತೀಯ ಪ್ರತಿನಿಧಿ ಸಮಿತಿಯ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಎಡನೀರು ಮಠದಲ್ಲಿ ಜರಗಿದ ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಕಾಸರಗೋಡು ತಾಲೂಕು ಕ್ಷೇತ್ರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕುವುದು ಹೇಗೆ ಎಂದು ಕಲಿಸಿದ ಭಾರತ ಜಗತ್ತಿಗೆ ಅನೇಕ ಕೊಡುಗೆಯನ್ನು ನೀಡಿದೆ. ಸನಾತನ ಭಾರತೀಯ ಸಂಸ್ಕಾರ ಜಗತ್ತಿಗೆ ಎಲ್ಲವನ್ನು ತಿಳಿಯ ಹೇಳಿದೆ ಎಂದು ಅವರು ಹೇಳಿದರು.
ಕೇರಳ ಕ್ಷೇತ್ರ ಸಮಿತಿಯ ರಾಜ್ಯ ಸಮಿತಿ ಸದಸ್ಯ ಐ.ಕೆ.ರಾಮದಾಸ್ ವಾಳುನ್ನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಾರಾಯಣನ್ ಮುಖ್ಯ ಭಾಷಣ ಮಾಡಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಾತೃ ಸಮಿತಿಯ ರಾಜ್ಯ ಅಧ್ಯಕ್ಷೆ ಕುಸುಮಾ ಟೀಚರ್, ಪ್ರೊ.ನಾರಾಯಣ ಬಟ್ಟತ್ತಿರಿಪ್ಪಾಡ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಅಪ್ಪಯ್ಯ ನಾೈಕ್ ಮಧೂರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ರಮೇಶನ್ ವಾಯಕ್ಕೋಡ್ ಸ್ವಾಗತಿಸಿದರು. ಮಧುಸೂದನ ಕರಿವೇಡಗ ವಂದಿಸಿದರು. ತಾಲೂಕು ಸಂಚಾಲಕ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.




.jpg)
