HEALTH TIPS

ರೈಲ್ವೇ ಸುರಕ್ಷತಾ ನಿಧಿಯ ದುರ್ಬಳಕೆ, ವರದಿಯಲ್ಲಿ ಶಾಕಿಂಗ್ ಮಾಹಿತಿ ರಿವೀಲ್​

                 ಒಡಿಸ್ಸಾ :ಒಡಿಸ್ಸಾದ ಬಾಲ್‌ಸೋರ್‌ನಲ್ಲಿ (Odisha) ಸಂಭವಿಸಿದ ತ್ರಿವಳಿ ರೈಲು ಅಪಘಾತಗಳು ದೇಶವನ್ನೇ ಬೆಚ್ಚಿಬೀಳಿಸಿರುವ ಭಯಾನಕ ರೈಲು ದುರಂತವಾಗಿದೆ (Train Accident). ಅದೆಷ್ಟೋ ಜೀವಗಳು ಬಲಿಯಾದ ಗಾಯಗೊಂಡ ಈ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಯಾಣಿಕರ ಜೀವಕ್ಕೆ ಸುರಕ್ಷತೆ ಹಾಗೂ ಭದ್ರತೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಇಂತಹ ಅಪಘಾತಗಳು ಹುಟ್ಟುಹಾಕಿವೆ.

                             ರೈಲ್ವೇ ನಿಧಿಯನ್ನೇ ದುರ್ಬಳಕೆ:

         ಆದರೆ ವರದಿಯ ಪ್ರಕಾರ ರೈಲ್ವೇ ಸುರಕ್ಷತೆಯನ್ನು ಸುಧಾರಿಸಲು 2017 ರಲ್ಲಿ ನರೇಂದ್ರ ಮೋದಿ ಸರ್ಕಾರ ರಚಿಸಿದ ವಿಶೇಷ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ. ಮಸಾಜರ್‌ಗಳು, ಮಣ್ಣಿನ ಪಾತ್ರೆ, ಎಲೆಕ್ಟ್ರಿಕಲ್ ಉಪಕರಣಗಳು, ಪೀಠೋಪಕರಣಗಳು, ಚಳಿಗಾಲದ ಜಾಕೆಟ್‌ಗಳು, ಕಂಪ್ಯೂಟರ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ಖರೀದಿಸಲು, ಉದ್ಯಾನಗಳನ್ನು ಅಭಿವೃದ್ಧಿಪಡಿಸಲು, ಶೌಚಾಲಯಗಳನ್ನು ನಿರ್ಮಿಸಲು, ಸಂಬಳ ಮತ್ತು ಬೋನಸ್ ಪಾವತಿಸಲು ಮತ್ತು ಧ್ವಜ ಕಟ್ಟಲು ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆಘಾತಕಾರಿ ಸುದ್ದಿಹೊರಬಿದ್ದಿದೆ. ಡಿಸೆಂಬರ್ 2022 ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಸಲ್ಲಿಸಿದ ಭಾರತೀಯ ರೈಲ್ವೇಯ ಲೆಕ್ಕಪರಿಶೋಧನಾ ವರದಿಯಲ್ಲಿ ಕೂಡ ಈ ಅಂಶವನ್ನು ಮರೆಮಾಡಲಾಗಿದೆ ಎಂಬುದು ಶೋಚನೀಯ ಸಂಗತಿಯಾಗಿದೆ.

                   ಖರ್ಚುವೆಚ್ಚಗಳ ಲೆಕ್ಕವನ್ನು ಮುಚ್ಚಿಹಾಕಲಾಗಿದೆ:

             ಡಿಸೆಂಬರ್ 2017, ಮಾರ್ಚ್ 2019, ಸೆಪ್ಟೆಂಬರ್ 2019 ಮತ್ತು ಜನವರಿ 2021 ಹೀಗೆ ಆಯ್ದ ನಾಲ್ಕು ತಿಂಗಳಲ್ಲಿ, 2017-18 ರಿಂದ 2020-21 ರವರೆಗಿನ 48-ತಿಂಗಳ ಅವಧಿಗೆ ಸಂಬಂಧಿಸಿದಂತೆ 11,464 ವೋಚರ್‌ಗಳ ಪರಿಶೀಲನೆಯು ಈ ದುರ್ಬಳಕೆ ವರದಿಯನ್ನು ಬಹಿರಂಗಪಡಿಸಿದ್ದು ಸುರಕ್ಷತಾ ನಿಧಿಯ ಅಡಿಯಲ್ಲಿ 48.21 ಕೋಟಿ ಮೌಲ್ಯದ ಲೆಕ್ಕಾಚಾರವನ್ನು ಅಸಮರ್ಪಕ ಬುಕ್ಕಿಂಗ್‌ಗಳ ಖರ್ಚುವೆಚ್ಚಗಳು ಎಂಬ ಶೀರ್ಷಿಕೆಯಡಿಯಲ್ಲಿ ಮುಚ್ಚಿಹಾಕಲಾಗಿದೆ ಎಂಬುದು ವರದಿಯಾಗಿದೆ.

              ರೈಲ್ವೆ ಸುರಕ್ಷತೆಯನ್ನು ಸುಧಾರಿಸಲು ಮೀಸಲಾದ ನಿಧಿಯನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವ ಇಲಾಖೆಯು ಮುಂದಿನ ಯೋಜನೆಗಳನ್ನು ಹೇಗೆ ಸೂಕ್ತವಾಗಿ ನಿಭಾಯಿಸಬಲ್ಲುದು ಎಂಬ ಚಿಂತೆಯನ್ನು ಹುಟ್ಟುಹಾಕಿದೆ. ಇದೊಂದು ವಂಚನೆಯ ಹಗರಣವಾಗಿದ್ದು ಇಂತಹ ಅದೆಷ್ಟೋ ನಿಧಿಗಳನ್ನು ಇಲಾಖೆ ಸ್ವಾಹಾ ಮಾಡಿದೆ ಎಂಬುದು ತಿಳಿದುಬಂದಿಲ್ಲ.

                                      ರೈಲ್ವೇ ಅಭಿವೃದ್ಧಿಗೆ ರೈಲು ಸಂರಕ್ಷಕ ಕೋಶ:

              2017-18ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಅನಾವರಣಗೊಳಿಸಲಾಗಿದೆ. ಆಗ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅನುದಾನದ ಬಗ್ಗೆ ಮಾಹಿತಿ ನೀಡಿದ್ದು ಪ್ರಯಾಣಿಕರ ಸುರಕ್ಷತೆಗಾಗಿ, ಐದು ವರ್ಷಗಳ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್‌ನೊಂದಿಗೆ ರಾಷ್ಟ್ರೀಯ ರೈಲು ಸಂರಕ್ಷಕ ಕೋಶವನ್ನು ರಚಿಸಲಾಗುವುದು ಎಂದು ತಿಳಿಸಿದ್ದರು. ರೈಲ್ವೆಗಳು ತಮ್ಮ ಸ್ವಂತ ಆದಾಯ ಮತ್ತು ಇತರ ಮೂಲಗಳಿಂದ ಸಮತೋಲನ ಸಂಪನ್ಮೂಲಗಳನ್ನು ವ್ಯವಸ್ಥೆಗೊಳಿಸುತ್ತವೆ ಎಂಬ ಮಾಹಿತಿ ನೀಡಿದ್ದರು.

ಪ್ರಪಂಚದಲ್ಲೇ ಮೂರನೇ ಅತಿ ದೊಡ್ಡದಾದ ಎಂದು ಹೇಳಲಾದ ಅವ್ಯವಸ್ಥೆಯ ಬೀಡಾಗಿರುವ ಭಾರತೀಯ ರೈಲ್ವೇ ವ್ಯವಸ್ಥೆಯನ್ನು ಆವರಿಸಿರುವ ಸಮಸ್ಯೆಗಳ ಮೂಲವು ನಿಧಿಯನ್ನು ರಚಿಸಿದ ವಿಧಾನದಲ್ಲಿದೆ ಹಾಗೂ ರೈಲ್ವೇಯ ಸುರಕ್ಷತೆಗಾಗಿ ಬಿಡುಗಡೆಗೊಂಡಿರುವ ನಿಧಿ ಇತರರ ಕಾಮನೆಗಳನ್ನು ಪೂರೈಸುವ ವಸ್ತುವಾಗಿ ಬಳಕೆಯಾಗಿದೆ. ಆದ್ಯತೆ, ಸುರಕ್ಷತೆಗೆ ಖರ್ಚುಮಾಡಬೇಕಾದ ಹಣ ಇತರರ ಭೋಗ್ಯಕ್ಕೆ ಬಳಕೆಯಾಗುತ್ತಿದೆ.

                                         ಮೋದಿ ಸರಕಾರವನ್ನು ಹಾಸ್ಯಮಾಡಿದ ಪ್ರತಿಪಕ್ಷಗಳು:

              ನಿಧಿಯನ್ನು ಅನಗತ್ಯ ಖರ್ಚುಗಳಿಗೆ ಬಳಸಲಾಗಿದೆ ಎಂಬ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಪ್ರತಿಪಕ್ಷವಾದ ಕಾಂಗ್ರೆಸ್ ಟ್ವಿಟರ್‌ನಲ್ಲಿ ವ್ಯಂಗ್ಯೋಕ್ತಿಗಳನ್ನು ಬಳಸಿದ್ದು ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಶ್ರೇಷ್ಠವಾಗಿದೆ! ಸಿಎಜಿ ವರದಿಗಳ ಪ್ರಕಾರ, ಭಾರತೀಯ ರೈಲ್ವೇಯು ‘ರಾಷ್ಟ್ರೀಯ ರೈಲು ಸಂರಕ್ಷಾ ಕೋಶ’ದಿಂದ ಕಾಲು ಮಸಾಜ್ ಮಾಡುವವರು, ಮಣ್ಣಿನ ಪಾತ್ರೆಗಳು, ಪೀಠೋಪಕರಣಗಳು, ಕಾರು ಬಾಡಿಗೆಗಳು, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನವುಗಳಿಗಾಗಿ ಅತಿರಂಜಿತವಾಗಿ ಖರ್ಚು ಮಾಡಿದೆ ಎಂದು ಬಣ್ಣಿಸಿದೆ.

                               ಬಾಲ್‌ಸೋರ್ ಅಪಘಾತದಿಂದ ಬಹಿರಂಗಗೊಂಡ ದುರ್ಬಳಕೆ:

                ಕಳೆದ ವಾರ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ-ರೈಲು ಅಪಘಾತ ಸಂಭವಿಸದೇ ಇರುತ್ತಿದ್ದರೆ ಬಹುಶಃ ಸರ್ಕಾರದ ಲೆಕ್ಕ ಪರಿಶೋಧಕರು ಮಾಡಿರುವ ರೈಲ್ವೇ ನಿಧಿಯ ದುರುಪಯೋಗದ ಸುದ್ದಿ ಎಂದಿಗೂ ಸಾರ್ವಜನಿಕವಾಗಿ ಬಹಿರಂಗವಾಗುತ್ತಿರಲಿಲ್ಲ. ದೇಶದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ.

                   2.4 ಕೋಟಿ ಪ್ರಯಾಣಿಕರನ್ನು ಸಾಗಿಸುವ 22,593 ರೈಲುಗಳು ಮತ್ತು 114,907 ಕಿಮೀ ರೈಲು ಜಾಲದಾದ್ಯಂತ ಪ್ರತಿದಿನ 9,141 ಸರಕು ರೈಲುಗಳನ್ನು ಓಡಿಸುವ ಅತ್ಯಂತ ನಿರ್ಣಾಯಕ ಅಂಶಕ್ಕೆ ರೈಲ್ವೆಯ ಉನ್ನತ ಅಧಿಕಾರಿಗಳ ದುರ್ಬಳಕೆ ಧೋರಣೆಗೆ ಸಿಎಜಿ ವರದಿಯು ಪ್ರಯಾಣಿಕರ ಸುರಕ್ಷತೆಯ ಸಂಪೂರ್ಣ ಪರಿಹಾರವನ್ನು ಪ್ರಶ್ನಿಸಿದೆ.

                  1.14 ಲಕ್ಷ ಕಿಲೋಮೀಟರ್ ರೈಲ್ವೇ ಜಾಲದಲ್ಲಿ ವಾರ್ಷಿಕವಾಗಿ 4,500 ಕಿಮೀ ಹಳಿಗಳನ್ನು ನವೀಕರಿಸಬೇಕೆಂದು ಸಿಎಜಿ 2015 ರಲ್ಲಿ ಶಿಫಾರಸು ಮಾಡಿದ 2015 ರಲ್ಲಿ ವರದಿ ಸಿದ್ಧಪಡಿಸಿತ್ತು. ಸುರಕ್ಷತಾ ನಿಧಿಯನ್ನು ಅತ್ಯಂತ ಪ್ರಮುಖ ಸ್ಥಾನದಲ್ಲಿರಿಸಲು ಕಾರಣ ಇದೇ ಆಗಿದೆ.

                                           ಕಳಪೆ ರೈಲ್ವೆ ಅನುದಾನ:

              ವರದಿಯು ರೈಲ್ವೇ ಇಲಾಖೆಗೆ ಯಾವಾಗಲೂ ಕಡಿಮೆ ಮೊತ್ತದ ಹಣವನ್ನು ನೀಡಲಾಗುತ್ತಿತ್ತು ಎಂಬುದನ್ನು ಗುರುತಿಸಿದೆ. ಮೂಲ ನಿಯಮಗಳ ಪ್ರಕಾರ, ಪ್ರತಿ ವರ್ಷ 20,000 ಕೋಟಿ ರೂ.ಗಳನ್ನು ಸುರಕ್ಷತಾ ನಿಧಿಗೆ ಸೇರಿಸಬೇಕಾಗಿತ್ತು. ಈ ಪೈಕಿ 15,000 ಕೋಟಿ ರೂ.ಗಳ ಮೊತ್ತವು ಕೇಂದ್ರದಿಂದ ಒಟ್ಟು ಬಜೆಟ್ ಬೆಂಬಲದ ರೂಪದಲ್ಲಿ ಬರುತ್ತದೆ; ಉಳಿದ 5,000 ಕೋಟಿ ರೂ.ಗಳನ್ನು ರೈಲ್ವೆಯ ಆಂತರಿಕ ಸಂಪನ್ಮೂಲಗಳಿಂದ ಹೊರತರಬೇಕು.

                ಈ ದಿಸೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ರೈಲ್ವೆ 20,000 ಕೋಟಿ ರೂವನ್ನು ಬಿಡುಗಡೆ ಮಾಡಬೇಕು. ಆದರೆ ಅವರು ನೀಡಿರುವ ಮೊತ್ತ ಕೇವಲ 4,225 ಕೋಟಿ ರೂಪಾಯಿಗಳು ಇದರಲ್ಲಿ ರೂ 15,775 ಕೋಟಿ ಕಡಿಮೆಯಾಗಿದೆ ಅಂದರೆ 78.9% ಕೊರತೆ ಕಂಡುಬಂದಿದೆ.

                                    ಯೋಜನೆಗೆ ತಣ್ಣೀರೆರಚಿರುವ ರೈಲ್ವೇ ವಿಭಾಗ:

                ಆಂತರಿಕ ಸಂಪನ್ಮೂಲಗಳಿಂದ ಹೊರತರಬೇಕಾದ ನಿಧಿಯಲ್ಲಿ ಕಡಿಮೆ ಮೊತ್ತ ಗಮನಿಸಿರುವ ಸಿಎಜಿ, ರೈಲ್ವೇಯ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ್ದ RRSK ಯ ರಚನೆಯ ಪ್ರಾಥಮಿಕ ಉದ್ದೇಶಕ್ಕೆ ತಣ್ಣೀರೆರಚಿದೆ ಎಂದು ತಿಳಿಸಿದೆ. ಈ ಕೊಡುಗೆ ತೀರಾ ಕಡಿಮೆ ಅಲ್ಲದೆ ಹೋದರೂ ಅಧಿಕಾರಿಗಳು ಅನಪೇಕ್ಷಿತಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ವರದಿ ಹೇಳುತ್ತದೆ. RRSK ಅಡಿಯಲ್ಲಿ ಆದ್ಯತೆಯೇತರ ಕೆಲಸಗಳ ಪಾಲು (ರೈಲ್ವೇ ಹಳಿಗಳ ದುರಸ್ತಿ, ನಿರ್ವಹಣೆ) 2017-18 ರಲ್ಲಿ 2.76 ಶೇಕಡಾದಿಂದ 2019-20 ರಲ್ಲಿ 6.36 ಶೇಕಡಾಕ್ಕೆ ಏರಿತು.

                   ಸಂಪೂರ್ಣ ಸಂಖ್ಯೆಯಲ್ಲಿ, 2017-18 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ RRSK ಅಡಿಯಲ್ಲಿ ಹಣವನ್ನು ಹೇಗೆ ಖರ್ಚು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 2019-20 ರಲ್ಲಿ 1,004 ಕೋಟಿ ರೂ ವನ್ನು ವಿನಿಯೋಗಿಸಲಾಗಿದೆ ಎಂಬುದಾಗಿ ವರದಿ ಆಪಾದಿಸಿದೆ.

                                            ರೈಲ್ವೇ ಕಾಮಗಾರಿಯಲ್ಲೂ ಹಣ ದುರ್ಬಳಕೆ

                 ಟ್ರ್ಯಾಕ್ ನವೀಕರಣಗಳನ್ನು ಒಳಗೊಂಡಿರುವ ಸಿವಿಲ್ ಇಂಜಿನಿಯರಿಂಗ್ ಕೆಲಸಗಳನ್ನು RRSK ಅಡಿಯಲ್ಲಿ ಆದ್ಯತೆ-1 ಕೆಲಸ ಎಂದು ವರ್ಗೀಕರಿಸಲಾಗಿದೆ ಇದಕ್ಕೆ ತಗಲುವ ವೆಚ್ಚ ರೂ 119,000 ಕೋಟಿ ರೂ.ಗಳ ಕಾರ್ಪಸ್ ಅನ್ನು ರೂ 1ಲಕ್ಷಕ್ಕೆ ಮಿತಿಗೊಳಿಸಲಾಗಿದ್ದು ಉಳಿದ ಹಣವನ್ನು ದುರ್ಬಳಕೆ ಮಾಡಲಾಗಿದೆ. RRSK ಅಡಿಯಲ್ಲಿ ವೆಚ್ಚವು 2017-18 ರಲ್ಲಿ 81.55 ಶೇಕಡಾದಿಂದ 2019-20 ರಲ್ಲಿ ಶೇಕಡಾ 73.76 ಕ್ಕೆ ಇಳಿಕೆಯ ಪ್ರವೃತ್ತಿಯನ್ನು ತೋರಿಸಿದೆ ಎಂದು ಲೆಕ್ಕಪರಿಶೋಧಕರು ಕಂಡುಕೊಂಡಿದ್ದಾರೆ. ಟ್ರ್ಯಾಕ್ ನವೀಕರಣ ಕಾಮಗಾರಿಗಳಿಗೆ 2018-19ರಲ್ಲಿ 9,607.65 ಕೋಟಿ ರೂ.ಗಳಿಂದ 2019-20ರಲ್ಲಿ 7,417 ಕೋಟಿ ರೂ.ಗೆ ಹಣ ಹಂಚಿಕೆಯಾಗಿದೆ.

                                              ಅಪಘಾತಗಳಿಗೆ ರೈಲ್ವೇ ಹಳಿ ತಪ್ಪುವಿಕೆಯೇ ಕಾರಣ

                 2017 ಮತ್ತು 2021 ರ ನಡುವಿನ ರೈಲ್ವೆ ಅಪಘಾತಗಳ ಸಿಎಜಿಯ ವಿಶ್ಲೇಷಣೆಯು 2,017 ಅಪಘಾತಗಳಲ್ಲಿ 1,392 ಅಥವಾ ಶೇಕಡಾ 69 ರಷ್ಟು ಪ್ರಮಾಣದ ಅಪಘಾತಗಳಿಗೆ ರೈಲ್ವೇ ಹಳಿ ತಪ್ಪುವಿಕೆಯೆ ಕಾರಣವಾಗಿದೆ ಎಂದು ತಿಳಿಸಿದೆ. ಹಳಿತಪ್ಪುವಿಕೆ ಮತ್ತು ಘರ್ಷಣೆಗಳಿಂದ ಉಂಟಾಗುವ ಅಪಘಾತಗಳ ಪ್ರಮಾಣವು 80% ದಷ್ಟು ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.

                    16 ವಲಯ ರೈಲ್ವೇಗಳಲ್ಲಿ (ZRs) ಹಳಿ ತಪ್ಪಿದ ಅಪಘಾತಗಳ 1129 ವಿಚಾರಣಾ ವರದಿಗಳ ವಿಶ್ಲೇಷಣೆಯು ಆಯ್ದ ಪ್ರಕರಣಗಳು/ಅಪಘಾತಗಳಲ್ಲಿ ಹಳಿ ತಪ್ಪಲು ಕಾರಣವಾದ 24 ಅಂಶಗಳನ್ನು ಬಹಿರಂಗಪಡಿಸಿದೆ. ಈ ಪ್ರಕರಣಗಳಲ್ಲಿ ಒಟ್ಟು 32.96 ಕೋಟಿ ರೂಪಾಯಿ ಹಾನಿ ಆಸ್ತಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

                      ಹಳಿತಪ್ಪಲು ಪ್ರಮುಖ ಕಾರಣವೆಂದರೆ ಟ್ರ್ಯಾಕ್ ನಿರ್ವಹಣೆಯಲ್ಲಿನ ಲೋಪ ದೋಷಗಳು ಎಂಬುದಾಗಿ ಗುರುತಿಸಲಾಗಿದ್ದು ಒಟ್ಟಾರೆಯಾಗಿ, 182 ಹಳಿತಪ್ಪುವಿಕೆಗಳು ಮೆಕ್ಯಾನಿಕಲ್ ವಿಭಾಗದ ದೋಷವಾಗಿದೆ ಅಂತೆಯೇ 154 ಅಪಘಾತಗಳು ಲೋಕೋ ಪೈಲಟ್‌ಗಳ ಕೆಟ್ಟ ಚಾಲನೆ, ಅತಿವೇಗದ ಕಾರಣದಿಂದ ಸಂಭವಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries