HEALTH TIPS

ಜ್ವರ ಪತ್ತೆ ಹಚ್ಚಲು ಹೊಸ ಆಯಪ್: ಇದು ನಿಮ್ಮ ಫೋನ್​​ನಲ್ಲಿ ಥರ್ಮಾಮೀಟರ್​ನಂತೆ ಕೆಲ್ಸ ಮಾಡುತ್ತೆ..!

               ವದೆಹಲಿಇಂದಿನ ದಿನಮಾನಗಳಲ್ಲಿ ಸ್ಮಾರ್ಟ್‌ಫೋನ್‌ನಿಂದ ಮಾಡಲಾಗದ ಕೆಲಸ ಯಾವುದಿಲ್ಲ ಹೇಳಿ? ಎಲ್ಲವನ್ನು ಆರಾಮಾಗಿ ಮೊಬೈಲ್​ನಿಂದಲೇ ಮಾಡಬಹುದಾಗಿದೆ. ಬ್ಯಾಂಕಿಂಗ್, ಶಿಕ್ಷಣ ಕಲಿಕೆ, ಆರೋಗ್ಯ ಟ್ರ್ಯಾಕಿಂಗ್, ಶಾಪಿಂಗ್​​​​​ ಹೀಗೆ ಹತ್ತಾರು ಕೆಲಸವನ್ನು ಇದರ ಮೂಲಕವೇ ಮಾಡುತ್ತೇವೆ.

                  ಇನ್ನು ಹಲವಾರು ಆಯಪ್​ಗಳ ಮುಖಾಂತರ ಹೃದಯ ಬಡಿತ, ನಡಿಗೆ ಮೇಲ್ವಿಚಾರಣೆ ಸೇರಿ ಆರೋಗ್ಯವನ್ನು ತಿಳಿಯಬಹುದಾಗಿದೆ. ಆದರೆ ನಿಮಗೆ ಜ್ವರವಿದ್ದರೆ ವೈದ್ಯರ ಬಳಿ ಹೋಗುವ ಅವಶ್ಯತೆ ಇದ್ದೇ ಇದೆ. ಜತೆಗೆ ಇದನ್ನು ಕಂಡು ಹಿಡಿಯಲು ಥರ್ಮಾಮೀಟರ್​​ನ ಅವಶ್ಯಕತೆ ಇದೆ.
                ಆದರೆ ಸದ್ಯ. ವಾಷಿಂಗ್ಟನ್ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವು ಸ್ಮಾರ್ಟ್​ಫೋನ್ ಮೂಲಕ ಜ್ವರವನ್ನು ಪತ್ತೆಹಚ್ಚಲು 'ಫೀವರ್ ಆಯಪ್​' ಎಂಬ ಹೊಸ ಅಪ್ಲಿಕೇಶನ್​​ನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ದೇಹದ ಉಷ್ಣತೆಯನ್ನು ಅಳೆಯಬಹುದಾಗಿದ್ದು, ಈ ಆಯಪ್​ ನಿಮ್ಮ ಫೋನ್​ನ್ನು ಥರ್ಮಾಮೀಟರ್ ಆಗಿ ಪರಿವರ್ತಿಸುತ್ತದೆ. ಎಂದರೆ ಮೊಬೈಲ್​ನಲ್ಲಿನ ಟಚ್ ಸ್ಕ್ರೀನ್​​ ಸೆನ್ಸಾರ್‌ನ ಮೂಲಕ ಕೆಲವೇ ಸೆಕೆಂಡ್​​ಗಳಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಅಳೆಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

                    ಇದನ್ನು ಪ್ರಾಯೋಗಿಕವಾಗಿ ತುರ್ತು ವಿಭಾಗದಲ್ಲಿ 37 ರೋಗಿಗಳ ಮೇಲೆ ಪರೀಕ್ಷಿಸಿದಾಗ, ಇದು ನಿಖರ ಫಲಿತಾಂಶವನ್ನು ನೀಡಿದೆ. ಬಳಿಕ ಥರ್ಮಾಮೀಟರ್​​ನಿಂದ ಪರೀಕ್ಷಿಸಿದರೆ ರೋಗಿಗಳ ದೇಹದ ಉಷ್ಣಾಂಶ ಸ್ವಲ್ಪ ಹೆಚ್ಚು ಕಡಿಮೆ ಇತ್ತು ಎಂದು ವಿಶ್ವವಿದ್ಯಾಲಯವು ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries