HEALTH TIPS

ಭಾರತ-ಪಾಕ್ ಚರ್ಚೆ ನಡೆಸುವವರೆಗೂ ಕಾಶ್ಮೀರದ ಪರಿಸ್ಥಿತಿ ಸುಧಾರಿಸಲ್ಲ: ಫಾರೂಕ್

                  ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಕೇಂದ್ರಾಡಳಿತ ಪ್ರದೇಶದ ಭವಿಷ್ಯ ಪರಿಹರಿಸುವವರೆಗೂ ಕಾಶ್ಮೀರದಲ್ಲಿ ಜಿ20 ಸಭೆ ನಡೆಸುವುದರಿಂದ ಕಣಿವೆಯ ಪ್ರವಾಸೋದ್ಯಮಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ.

                 ಶ್ರೀನಗರದಲ್ಲಿ ಜಿ20 ಸಭೆ ನಡೆಸುವುದರಿಂದ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯೋಜನವಾಗುತ್ತದೆಯೇ ಎಂಬ ಪ್ರಶ್ನೆಗೆ ಫಾರೂಕ್‌ ಉತ್ತರಿಸಿದರು.

               ಚುನಾಯಿತ ಸರ್ಕಾರದ ಕೊರತೆಯಿಂದಾಗಿ ಜಮ್ಮು ಮತ್ತು ಕಾಶ್ಮೀರವು ಭಾರಿ ನಷ್ಟ ಅನುಭವಿಸುತ್ತಿದೆ. ಇಲ್ಲಿನ ಪರಿಸ್ಥಿತಿ ಸುಧಾರಿಸದ ಹೊರತು ಮತ್ತು ಈ ರಾಜ್ಯದ ಭವಿಷ್ಯವನ್ನು ಹೇಗೆ ರೂಪಿಸುವುದು ಎಂಬುದರ ಕುರಿತು ಎರಡು ದೊಡ್ಡ ದೇಶಗಳು ಮಾತುಕತೆ ನಡೆಸದ ಹೊರತು ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿಸಿದ್ದಾರೆ.

                 'ಅನೇಕ ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಗಳನ್ನು ದುರಸ್ತಿಪಡಿಸಲಾ‌ಯಿತು. ಗೋಡೆಗಳಿಗೆ ಹೊಸ ಬಣ್ಣದ ಲೇಪನ ಸಿಕ್ಕಿತು. ಬೀದಿ ದೀಪಗಳು ಕೆಲಸ ಮಾಡಲು ಪ್ರಾರಂಭಿಸಿದವು. ನಾವು ಅದರಿಂದ ಪ್ರಯೋಜನ ಪಡೆದಿದ್ದೇವೆ' ಎಂದರು.

                     ಜಮ್ಮು, ಕಾಶ್ಮೀರದಲ್ಲಿ ಚುನಾಯಿತ ಸರ್ಕಾರದ ಕೊರತೆ ಬಗ್ಗೆ ಮಾತನಾಡಿದ ಅಬ್ದುಲ್ಲಾ, 'ಚುನಾಯಿತ ಸರ್ಕಾರವಿದ್ದಾಗ ಪ್ರಜಾಪ್ರಭುತ್ವ ಇರಲಿದೆ. ಒಬ್ಬ ಲೆಫ್ಟಿನೆಂಟ್ ಗವರ್ನರ್ ಮತ್ತು ಅವರ ಸಲಹೆಗಾರ ಇಡೀ ರಾಜ್ಯ ನೋಡಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಪ್ರದೇಶಗಳನ್ನು ನೋಡಿಕೊಳ್ಳುವುದು ಶಾಸಕರ ಕರ್ತವ್ಯವಾಗಿದೆ. ಅಧಿಕಾರಶಾಹಿಯು ಈ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು 60 ವರ್ಷದವರೆಗೆ ನಿವೃತ್ತರಾಗುವುದಿಲ್ಲ ಎಂದರು.

                    ಶಾಸಕ ಪ್ರತಿ ಐದು ವರ್ಷಕ್ಕೊಮ್ಮೆ ಜನರ ಬಳಿಗೆ ಹೋಗಬೇಕು. ಅವರು ಕೆಲಸ ಮಾಡದಿದ್ದರೆ ಮತಗಳನ್ನು ಪಡೆಯುವುದಿಲ್ಲ. ಆದ್ದರಿಂದ, ಇಲ್ಲಿ ಚುನಾವಣೆ ನಡೆಯುವುದು ಬಹಳ ಮುಖ್ಯ. ತಮ್ಮ ಪಕ್ಷವು ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧ ಎಂದು ತಿಳಿಸಿದ್ದಾರೆ.

              ಕಾಶ್ಮೀರದ ಕೆಲವು ಪಕ್ಷಗಳು ಈ ಹಿಂದೆ ಚುನಾವಣೆಯನ್ನು ಹೈಜಾಕ್ ಮಾಡಿವೆ ಎಂಬ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ‌'ಅದನ್ನು ಎದುರಿಸಲು ಅವರಿಗೆ ಮಾರ್ಗಗಳಿಲ್ಲವೇ? ಅವರು ಹೈಕೋರ್ಟ್ ಅಥವಾ ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದು. ಇಂದಿರಾ ಗಾಂಧಿ ಅವರನ್ನೂ ಹೈಕೋರ್ಟ್‌ ಪದಚ್ಯುತಗೊಳಿಸಿತು. ಹಲವು ದಾರಿಗಳಿವೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries