ಕಾಸರಗೋಡು: ನರೇಂದ್ರ ಮೋದಿ ಸರಕಾರದ 9ನೇ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಕಾಸರಗೋಡು ಲೋಕಸಭಾ ಕ್ಷೇತ್ರ ಮಟ್ಟದ ಸಂಪರ್ಕ್ ಸೇ ಸಮರ್ಥನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಪಾಲಕುನ್ನು ಕಯಗಂ ಶ್ರೀ ಭಗವತಿ ದೇವಸ್ಥಾನದ ವಿಧಿವಿಧಾನದ ಕರ್ಮಿ ಕಪ್ಪನಕಲ್ ಕುಞÂಕಣ್ಣನ್ ಆಯತಾರ್ ಮನೆಗೆ ಭೇಟಿ ನೀಡಲಾಯಿತು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಂಜಿತ್ ಅಭಿಯಾನ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕಾರ್ಯದರ್ಶಿಗಳಾದ ಎನ್. ಮಧು, ಉಮಾ ಕಡಪುರ, ಕೋಶ ಸಂಯೋಜಕ ಎನ್. ಬಾಬುರಾಜಿ, ಮಾಧ್ಯಮ ಕೋಶಗಳ ಸಂಸ್ಥಾಪಕಿ ಶ್ರೀಮತಿ. ಕೃಷ್ಣದಾಸಿ, ಉದುಮ ಮಂಡಲ ಅಧ್ಯಕ್ಷ ಕೆ.ಟಿ. ಪುರುಷೋತ್ತಮಣಿ, ಕೋಶಾಧಿಕಾರಿ ತಂಬಾನ್ ಆಚೇರಿ, ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಒಬಿಸಿ ಮೋರ್ಚಾ ಮಂಡಲದ ಅಧ್ಯಕ್ಷ ಪ್ರದೀಪ್ ಎಂ ಕೋಟಕಣಿ, ಉದುಮ ಪಂಚಾಯಿತಿ ಸಮಿತಿ ಕಾರ್ಯದರ್ಶಿ ಮಧು ಅಡ್ಕತ್ತಬೈಲ್, ಚೆಮ್ಮನಾಡು ಪಂಚಾಯತ್ ಕಾರ್ಯದರ್ಶಿ ಮುರಳಿಕೃಷ್ಣನ್ ಉಪಸ್ಥಿತರಿದ್ದರು. ಇದೇ ಸಂದರ್ಭ ಹಿರಿಯ ಕಾರ್ಯಕರ್ತ ಪಿ. ಜಿ. ಕುಮಾರನ್, ರಾಷ್ಟ್ರೀಯ ಕಬಡ್ಡಿ ಪಟು ಸಾಗರ್ ಆಚ್ಚೇರಿ ಅವರ ಮನೆ ಭೇಟಿಯೂ ನಡೆಯಿತು.





