ಸಮರಸ ಚಿತ್ರಸುದ್ದಿ: ಮಧೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಸರಗೋಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವತಿಯಿಂದ ಸಸಿಗಳನ್ನು ನೆಡಲಾಯಿತು. ಅಡೂರು ದೇಗುಲದ ಉತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಅತ್ತನಾಡಿ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮಧೂರು ಗ್ರಾಪಂ ಮಾಜಿಸ ದಸ್ಯ ಯೋಗೀಶ್ ಆಚಾರ್ಯ, ಮಧೂರು ದೇಗುಲದ ಹಿರಿಯ ಅಧಿಕಾರಿ ಬಿ.ಎನ್ ಸುಬ್ರಹಣ್ಯ, ಕೆ. ಶ್ರೀಕೃಷ್ಣ, ಕೆ.ಎಸ್ ಮಧ್ಯಸ್ಥ, ಕೃಷ್ಣ ಪ್ರಸಾದ ಅಡಿಗ, ನಾರಾಯಣ ಕಾರಂತ, ರೇಖಾ, ಉಷಾ, ಪುಷ್ಪ ರಮೇಶ ಮಾರಾರ್, ಮಾಧವ ಉಪಸ್ಥಿತರಿದ್ದರು.




