ಮುಳ್ಳೇರಿಯ: ಮುಳ್ಳೇರಿಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ವಾಚನಾಲಯದ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ದಿನದ ಅಂಗವಾಗಿ ಹೈಸ್ಕೂಲು ಹಾಗೂ ಹಿರಿಯ ಪ್ರಾಥಮಿಕ ವಿಭಾಗಕ್ಕೆ "ಕುಡಿತದ ವಿರುದ್ಧ" ಎಂಬ ವಿಷಯದ ಬಗ್ಗೆ ಚಿತ್ರರಚನಾ ಸ್ಪರ್ಧೆಯನ್ನು ನಡೆಸಲಾಯಿತು. ಪ್ರಾಚಾರ್ಯೆ ಎ.ವಿ.ಸುಧಾ ಉದ್ಘಾಟಿಸಿದರು. ಇ.ಜನಾರ್ದನನ್ ಬಹುಮಾನ ವಿತರಣೆ ನಡೆಸಿದರು. ಚಂದ್ರನ್ ಮೊಟ್ಟಮ್ಮಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಕೆ.ಮೋಹನನ್, ವಿನೀತ್ ನಾರಾಯಣನ್, ಲೋಕೇಶ್ ಬಿ., ಗೋಪಾಲಕೃಷ್ಣ ಕೆ ಮಾತನಾಡಿದರು. ಸ್ಪರ್ಧೆಯಲ್ಲಿ ಹೈಸ್ಕೂಲು ವಿಭಾಗದಲ್ಲಿ ಅಮಯಾ ಪ್ರಥಮ, ಶ್ರೇಯಾ ಕೆ.ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅಲನ್ ಜಾನ್ ಪ್ರಥಮ ಅದ್ವೈತ್ ಎಂ. ದ್ವಿತೀಯ ಸ್ಥಾನಪಡೆದರು.




.jpg)
