ಮಂಜೇಶ್ವರ: ಕಣ್ವತೀರ್ಥ ಶ್ರೀ ರಾಮಾಂಜನೇಯ ಕ್ಷೇತ್ರಕ್ಕೆ ಪೇಜಾವರ ಅಧೊಕ್ಷಜ ಶ್ರೀಕೃಷ್ಣ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸೋಮವಾರ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ದಾರ ಕಾರ್ಯಪ್ರಗತಿಯ ಬಗ್ಗೆ ಈ ಸಂದರ್ಭ ಶ್ರೀಗಳು ಅವಲೋಕನ ನಡೆಸಿದರು. ಅರಿಬೈಲು ಗೋಪಾಲ ಶೆಟ್ಟಿ ಅವರೊಡನೆ ಮುಂದಿನ ಕೆಲಸದ ಬಗ್ಗೆ ಸಮಾಲೋಚನೆ ನಡೆಸಿದರು. ಅರ್ಚಕ ರಮೇಶ್ ಉಪಾಧ್ಯಾಯ ಉಪಸ್ಥಿತರಿದ್ದರು.




.jpg)
.jpg)
