ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ನಾಯಮರ್‍ಮೂಲೆಯಲ್ಲಿ ಮೇಲ್ಸೇತುವೆಗೆ ಅನುಮತಿ ನೀಡುವಂತೆ ಕ್ರಿಯಾ ಸಮಿತಿ ವತಿಯಿಂದ ರಸ್ತೆ ತಡೆ ನಿರ್ಮಿಸಿ ಪ್ರತಿಭಟಿಸಲಾಯಿತು. ಪ್ರತಿಭಟನೆ ಅಂಗವಾಗಿ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮೇಲ್ಸೇತುವೆಗೆ ಒತ್ತಾಯಿಸಿ ಮೂರು ತಿಂಗಳ ಸತ್ಯಾಗ್ರಹದ ಅಂಗವಾಗಿ ಚಕ್ರಸ್ತಂಭನವನ್ನು ಆಯೋಜಿಸಲಾಗಿತ್ತು. ಮಾಜಿ ಸಚಿವ ಸಿ.ಟಿ.ಅಹ್ಮದಲಿ ಧರಣಿ ಉದ್ಘಾಟಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಪಿ.ಬಿ.ಅಚ್ಚು ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಸಂಚಾಲಕ ಖಾದರ್ ಪಾಲೋಟ್ ಸ್ವಾಗತಿಸಿದರು. ಮೂಸಾ ಬಿ.ಚೆರ್ಕಳ, ಎ.ಅಹ್ಮದ್ ಹಾಜಿ, ನಾಸರ್ ಚೆರ್ಕಳ, ಬೆರ್ಕಳ ಅಬ್ದುಲ್ಲಕುಞÂ, ಅಶ್ರಫ್ ನಾಲತ್ತಡ್ಕ, ಎನ್.ಎ.ತಾಹಿರ್, ಬದ್ರುದ್ದೀನ್ ಪ್ಲಾನೆಟ್, ಎ.ಎಲ್. ಮುಹಮ್ಮದ್ ಅಸ್ಲಂ ಮತ್ತು ಶರೀಫ್ ಕುರಿಕಲ್ ಉಪಸ್ಥಿತರಿದ್ದರು.
ಪಿ.ಪಿ ಅನ್ವರ್, ಎನ್.ಎಂ. ಇಬ್ರಾಹಿಂ, ಎನ್.ಎಂ. ಹ್ಯಾರಿಸ್, ಬಶೀರ್ ಕಡವತ್, ಬದ್ರುದ್ದೀನ್, ಟಿ.ಕೆ.ನೌಶಾದ್, ಎ.ಎಲ್. ಅಮೀನ್, ನೌಶಾದ್ ಮೀಲಾದ್, ಅಬೂಬಕರ್ ಕರುಮಾನ್, ಅಶ್ರಫ್ ಜ ಲ್ಸೂರ್, ಫೈಝ್ ಕಡವತ್, ಪಿ.ಬಿ. ಹ್ಯಾರಿಸ್, ಎ. ಬಶೀರ್, ಎ. ಅನ್ವರ್, ಫೈಜ್ ಖಾಲಿ, ಮೊಯ್ತು ಅರಫಾ, ಕೆ.ಐ. ಕರೀಂ ಮತ್ತು ಎಸ್.ಮೊಯ್ದು ನೇತೃತ್ವ ವಹಿಸಿದ್ದರು.





