ಕಾಸರಗೋಡು : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಕಾಸರಗೋಡು ವಲಯ ಸಮಿತಿ ವತಿಯಿಂದ ಶೌರ್ಯ ಕಾರ್ಯಕ್ರಮದ 3 ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಮಧೂರು ಸನಿಹದ ಉಳಿಯತ್ತಡ್ಕದಲ್ಲಿ ಆಚರಿಸಲಾಯಿತು
ಕಾರ್ಯಕ್ರಮದ ಅಂಗವಾಗಿ ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರದ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ಉಳಿಯತ್ತಡ್ಕ ಸಮೀಪದ ಬಡ ಕುಟುಂಬದ ಸಾವಿತ್ರಿ ಅವರ ಶೌಚಗೃಹದ ದುರಸ್ತಿಕಾರ್ಯಗಳನ್ನು ಘಟಕದ ವತಿಯಿಂದ ಶ್ರಮದಾನದ ಮೂಲಕ ನಡೆಸಿಕೊಡಲಾಯಿತು. ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀಮತಿ ಹಾಗೂ ಸೇವಾ ಪ್ರತಿನಿಧಿ ಶೋಭಾ, ಘಟಕ ಪ್ರತಿನಿಧಿ ರವೀಂದ್ರ, ಸಂಯೋಜಕಿ ಮೀರಾ ನೇತೃತ್ವದ ಪ್ರತಿನಿಧಿಗಳ ತಂಡ ಶ್ರಮದಾನದಲ್ಲಿ ಸಹಕರಿಸಿದರು.





