ಕಾಸರಗೋಡು: ಕಾಡುಹಂದಿ ಡಿಕ್ಕಿಯಾಗಿ ಸ್ಕೂಟರ್ ಮಗುಚಿಬಿದ್ದ ಪರಿಣಾಮ ಸವಾರ ಪೆರಿಯ ವಿಲ್ಲರಂಪಡಿ ನಿವಾಸಿ ಕೆ.ವಿ ಬಾಬು ಮಠತ್ತಿಲ್ ಸೋಮವಾರ ಮೃತಪಟ್ಟಿದ್ದಾರೆ.
ಪೆರಿಯ ಚಿಕ್ಕಿಪಳ್ಳ ಎಂಬಲ್ಲಿ ಸೋಮವಾರ ಬೆಳಗ್ಗೆ ಇವರು ಸಂಚರಿಸುತ್ತಿದ್ದ ಸ್ಕೂಟರ್‍ಗೆ ಕಾಡುಹಂದಿ ಡಿಕ್ಕಿಯಾಗಿದೆ. ಗಂಭೀರಗಾಯಗೊಂಡು ರಸ್ತೆಬದಿ ಬಿದ್ದಿದ್ದ ಇವರನ್ನು ಈ ಹಾದಿಯಾಗಿ ಆಗಮಿಸಿದ ಯೂತ್‍ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿರಾಜೇಶ್ ಪೆರಿಯ ಮತ್ತು ಅನೀಶ್ ಕಲ್ಯೋಟ್ ಎಂಬವರು ತಕ್ಷಣ ಆಂಬುಲೆನ್ಸ್ ಕರೆಸಿ ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಉನ್ನತ ಚಿಕಿತ್ಸೆಗಾಗಿ ಕಣ್ಣೂರುಇನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಬಾಬು ಅವರು ಕುಂಬಳೆಯ ಬ್ಯಾಟರಿ ಅಂಗಡಿಯೊಂದರಲ್ಲಿ ಕಾರ್ಮಿಕರಾಗಿದ್ದರು.


