ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕಾಸರಗೋಡಿನಲ್ಲಿ ಇದೇ ಮೊದಲ ಬಾರಿಗೆ 'ಕಾಸರಗೋಡು ಕನ್ನಡ ಹಬ್ಬ'ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಜೂ. 24ರಿಂದ 30ರ ವರೆಗೆ ಜರುಗಲಿದೆ. ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನರಿ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಜೂ. 24ರಂದು ಸಂಜೆ 6ಕ್ಕೆ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣ ನಾರಾಯಣೀಯಂನಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನಕಲಾ ಮಂದಿರ ವತಿಯಿಂದ ಯಕ್ಷಗಾನ ನಡೆಯುವುದು. 25ರಂದು ಸಂಜೆ 5ಕ್ಕೆ ವರ್ಕಾಡಿ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಮುಲ್ಕಿ ರವೀಂದ್ರ ಪ್ರಭು ಮತ್ತು ಬಳಗದವರಿಂದ ಭಕ್ತಿ, ಭಾವ, ಜನಪದ ಗೀತೆ'ಬಾರಿಸು ಡಿಂಡಿಮ, 26ರಂದು ಸಂಜೆ 5.30ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ಶಂ.ನಾಡಿಗ ಕುಂಬಳೆ ಮತ್ತು ಬಳಗದವರಿಂದ ಹರಿಕತೆ, ಶ್ರದ್ಧಾ ನಾಯರ್‍ಪಳ್ಳ-ಮೇಧಾ ನಾಯರ್ಪಳ್ಳ ಅವರಿಂದ ಗಮಕ ವಾಚನ ನಡೆಯುವುದು.
27ರಂದು ಮಧ್ಯಾಹ್ನ 2.30ಕ್ಕೆ ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಬೈಕಾಡಿ ಪ್ರತಿಷ್ಠಾನದ ರತ್ನ ಕಲಾಲಯ ನಿರ್ದೇಶಕಿ ಅಕ್ಷತಾ ಬೈಕಾಡಿ ಅವರೊಂದಿಗೆ ರಶ್ಮೀ ಉಡುಪ ಮತ್ತು ರಶ್ಮೀ ಭಟ್ ಅವರಿಂದ ಭರತನಾಟ್ಯ, 28ರಂದು ಸಂಜೆ 6ಕ್ಕೆ ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ವಿದ್ವಾನ್ ಉಪೇಂದ್ರ ಮಲ್ಯ ಅವರಿಂದ ಭರತ ನಾಟ್ಯ, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನದ ಶಿಲ್ಪಾ ಜೋಷಿ ಅವರಿಂದ ನಾಟಕ'ನನ್ನೊಳಗಿನ ಅವಳು'ಪ್ರದರ್ಶನಗೊಳ್ಳಲಿದೆ. 29ರಂದು ಸಂಜೆ 5.30ಕ್ಕೆ ಉಪ್ಪಳ ಕೊಂಡೆವೂರು ಗಾಯತ್ರೀ ಮಂಟಪದಲ್ಲಿ ವಿದುಷಿ ಉಷಾಈಶ್ವರ ಭಟ್ ಮತ್ತು ತಂಡದಿಂದ ಕರ್ನಾಟಕ ಸಂಗೀತ(ದಾಸ ಕೀರ್ತನೆ), ಕಂಬಾರು ಶ್ರೀ ದುರ್ಗಾಪರಮೇಶ್ವರೀ ಭಜನಾ ತಂಡದಿಂದ ಕುಣಿತ ಭಜನೆ, 30ರಂದು ಸಂಜೆ 5ಕ್ಕೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಭಾಂಗಣದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತಂಡದಿಂದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ಜರುಗಲಿರುವುದು.

