HEALTH TIPS

ಕೊಂಡೆವೂರು ವಿದ್ಯಾಪೀಠದಲ್ಲಿ ಶಿಕ್ಷಕ: ರಕ್ಷಕಸಂಘದ ಮಹಾಸಭೆ

        ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದವಿದ್ಯಾಪೀಠದಲ್ಲಿ 2023-24ನೇ ಶೈಕ್ಷಣಿಕವರ್ಷದ ಶಿಕ್ಷಕ-ರಕ್ಷಕಮಹಾಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಸ್ಥಾಪಕÀ ಶ್ರೀ ಯೋಗಾನಂದಸರಸ್ವತೀಸ್ವಾಮೀಜಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕಿ ರೇಖಾಪ್ರದೀಪ್ ಕಳೆದ ಶೈಕ್ಷಣಿಕವರ್ಷದ ಶಾಲಾವರದಿ ಮಂಡಿಸಿದರು. ಶಾಲಾಪ್ರಾಂಶುಪಾಲ ಪ್ರವಿಧ್ 2022-23ನೇ ಸಾಲಿನ ಆಯವ್ಯಯ ಮಂಡಿಸಿದರು. 

           ಮಹಾಸಭೆಗೆ ಪೂರ್ವಭಾವಿಯಾಗಿ ತರಗತಿವಾರು ಸಭೆಯನ್ನು ನಡೆಸಿ ಪ್ರತಿ ತರಗತಿಯಿಂದ ತಲಾ ಓರ್ವ ಪುರುಷ ಹಾಗೂ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆಮಾಡಲಾಯಿತು. ಬಳಿಕ ಶ್ರೀಗಳವರು ತಾರಾನಾಥ ಇವರನ್ನು ಶಿಕ್ಷಕ-ರಕ್ಷಕಸಂಘದ ಅಧ್ಯಕ್ಷರನ್ನಾಗಿ, ಅನಂತ ಭಟ್ ಇವರನ್ನು ಉಪಾಧ್ಯಕ್ಷರನ್ನಾಗಿ, ಆಶಾಪ್ರಕಾಶ್ ಇವರನ್ನು ಮಾತೃಸಮಿತಿಯ ಅಧ್ಯಕ್ಷೆಯನ್ನಾಗಿ, ವಂದಿತಾ ಅಡಿಗ ಇವರನ್ನು ಉಪಾಧ್ಯಕ್ಷೆಯನ್ನಾಗಿ ಹಾಗೂ ಅರವಿಂದಾಕ್ಷನ್ ಇವರನ್ನು ಶಿಶುವಾಟಿಕಾ ಅಧ್ಯಕ್ಷರನ್ನಾಗಿ ಪ್ರಸ್ತುತ ಶೈಕ್ಷಣಿಕವರ್ಷಕ್ಕೆ ಆಯ್ಕೆಮಾಡಿದರು.


          ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಥಮ ಮುಖ್ಯಶಿಕ್ಷಕಿ, ರಾಜ್ಯಪ್ರಶಸ್ತಿಪುರಸ್ಖೃತೆ ದಿವಂಗತ ಶಾರದಾ ಟೀಚರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ  ಅವರನ್ನು ಸ್ಮರಿಸಲಾಯಿತು ಹಾಗೂ ಅವರ ಸ್ಮರಣಾರ್ಥ 2022-23ನೇ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲಾಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಕೃಷ್ಣಮೋಹನ್ ಗೆ ಸನ್ಮಾನ ಹಾಗೂ ನಗದುಪುರಸ್ಕಾರವನ್ನು ನೀಡಲಾಯಿತು. ಇದರೊಂದಿಗೆ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲಾಮಟ್ಟದಲ್ಲಿ ದ್ವಿತೀಯಸ್ಥಾನ ಗಳಿಸಿದ ಸಾಕ್ಷೀ, ಸಂಸ್ಕøತ ವಿಷಯದಲ್ಲಿ 100 ರಲ್ಲಿ 100 ಅಂಕಗಳನ್ನು ಗಳಿಸಿದ ಕೃಷ್ಣಮೋಹನ, ಅಶ್ವಿನೀ ಹಾಗೂ ಪ್ರತ್ಯೂಷಾ ಇವರನ್ನೂ ಶಾಲು ಹೊದಿಸಿ ಅಭಿನಂದಿಸಲಾಯಿತು. ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ ನೂರು ಶೇಕಡಾ ಫಲಿತಾಂಶ ಲಭಿಸುವಲ್ಲಿ ಶ್ರಮಿಸಿದ ಶಿಕ್ಷಕವರ್ಗವನ್ನು ಶ್ರೀಗಳವರು ಶಾಲು ಹೊದಿಸಿ ಅಭಿನಂದಿಸಿದರು.

             ಶಾಲಾ ಕಾರ್ಯಕಾರೀ ಸಮಿತಿಯ ಸದಸ್ಯ ಚಂದ್ರಹಾಸ ಶುಭ ಹಾರೈಸಿದರು. ಸಮಿತಿ ಸದಸ್ಯ ಸುರೇಶ್, ಸುಧಾಕರ ಮಾಸ್ತರ್, ಕಮಲಾಕ್ಷ ಮಾಸ್ತರ್ ಉಪಸ್ಥಿತರಿದ್ದರು. ಶಾಲಾಪ್ರಾಂಶುಪಾಲ ಪ್ರವಿಧ್ ಸ್ವಾಗತಿಸಿ, ಶಿಕ್ಷಕಿ ಸುಮಾ ವಂದಿಸಿದರು. ಮಲ್ಲಿಕಾ ಹಾಗೂ  ನಿಶಿತಾ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries