ಬದಿಯಡ್ಕ : ಕನ್ನಡವನ್ನು ಬೆಳೆಸಬೇಕಾದಂತಹಾ ಈ ಪ್ರದೇಶದಲ್ಲಿ ಕನ್ನಡವನ್ನು ಉಳಿಸಬೇಕಾದಂತಹಾ ಪರಿಸ್ಥಿತಿ ಇದೆ. ನಮ್ಮ ಭಾಷೆಯ ಮೇಲೆ ಅನ್ಯ ಭಾಷೆಯ ಪ್ರಭಾವವು ಬಹಳವಾಗಿ ಆಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೂ ಕೂಡಾ ಕನ್ನಡದ ಭಾಷಾ ಶುದ್ಧತೆಯನ್ನು ಉಳಿಸಬೇಕಾದ ಅನಿವಾರ್ಯತೆ ಇದೆ' ಎಂದು ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಹೇಳಿದರು.
ಅವರು ಅವರು ಭಾನುವಾರ ನೀರ್ಚಾಲಿನ ಎಂಎಸ್‍ಸಿ ಎಎಲ್‍ಪಿ ಶಾಲೆಯಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ನಡೆದ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ 'ಸಾಮಾಜಿಕ ನೆಲೆಯಲ್ಲಿ ಕನ್ನಡ' ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
'ಕನ್ಡಡ ಮಾದ್ಯಮದಲ್ಲಿ 1ರಿಂದ 10ನೇ ತರಗತಿಯ ತನಕ ಕಲಿತ ಮಕ್ಕಳಿಗೆ ಕೇರಳ ಹಾಗೂ ಕರ್ನಾಟಕದಲ್ಲಿ ಗರಿಷ್ಠ ಸೌಲಭ್ಯ ದೊರೆಯುತ್ತದೆ. ಭಾಷೆ ಉಳಿದಾಗ ನಮ್ಮ ಸಂಸ್ಕøತಿಯೂ ಉಳಿಯುತ್ತದೆ. ಕನ್ನಡ ಭಾಷಾ ರಕ್ಷಣೆಯು ಕನ್ನಡಿಗರ ಕರ್ತವ್ಯ. ಭಾಷೆಯ ಕಡಿಮೆ ಬಳಕೆಯಿಂದ ಸಂಸ್ಕøತಿಯೂ ನಾಶವಾಗುತ್ತದೆ' ಎಂದು ಅವರು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ,' ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ನೆಡೆಯುತ್ತಿರುವ ಈ ಗ್ರಾಮ ಪರ್ಯಟನೆಯ ಸರಣಿ ಕಾರ್ಯಕ್ರಮದಲ್ಲಿ ನಾಡಿನಲ್ಲಿ ಸಂಸ್ಕತಿಯ ರಕ್ಷಣೆ ಮಾಡಬಹುದು. ಈ ಸರಣಿಯು ಯಶಸ್ವಿಯಾಗಲಿ' ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ಕಾರ್ಯದರ್ಶಿ ಸುಂದರ ಬಾರಡ್ಕರಿಗೆ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಕಾರ್ಯದರ್ಶಿ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಇದ್ದರು. ನೈತಿಕ್ ರೈ ಪೆರಡಾಲ ಪ್ರಾರ್ಥನೆ ಹಾಡಿದರು. ಭಾಗ್ಯಶ್ರೀ ಕುಂಚಿನಡ್ಕ ಸ್ವಾಗತಿಸಿದರು. ನಾರಾಯಣ ಭಟ್ ಅನ್ನಡ್ಕ ವಂದಿಸಿದರು. ಅನ್ವಿತಾ ತಲ್ಪನಾಜೆ ನಿರೂಪಿಸಿದರು. ನಂತರ ಯಕ್ಷಗಾನದ ಹಿಮ್ಮೇಳ-ಮುಮ್ಮೇಳ ಶಿಕ್ಷಕ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನೇತೃತ್ವದಲ್ಲಿ ಯಕ್ಷಗಾನ ಬಣ್ಣಗಾರಿಕಾ ಶಿಬಿರ ನಡೆಯಿತು.




.jpg)
