ಬದಿಯಡ್ಕ: ಎಕೆಪಿಎ ರಾಜ್ಯ ಸಮಿತಿಯ ನೇತೃತ್ವದಲ್ಲಿ ಜೂ.15,16,17ರಂದು ಅಂಗಮಾಲಿಯಲ್ಲಿ ನಡೆಯಲಿರುವ ಫೋಟೋಪೆಸ್ಟ್ 2023 ವಾಹನ ಪ್ರಚಾರ ಜಾಥಾಕ್ಕೆ ಬದಿಯಡ್ಕ ಘಟಕದ ವತಿಯಿಂದ ಸ್ವಾಗತಿಸಲಾಯಿತು. ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ ಉದ್ಘಾಟಿಸಿದರು. ಜಿಲ್ಲಾ ಜೊತೆಕಾರ್ಯದರ್ಶಿ ಸುೀರ್ ಕೆ., ಕೋಶಾಧಿಕಾರಿ ವೇಣು ವಿ.ವಿ. ಮಾತನಾಡಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಪದಾಧಿಕಾರಿ ಉದಯ ಕಂಬಾರು ವಂದಿಸಿದರು. ಎಕೆಪಿಎ ಕುಂಬಳೆ ವಲಯದ ಪದಾಧಿಕಾರಿಗಳು, ಬದಿಯಡ್ಕ ಘಟಕ ಸದಸ್ಯರು ಹಾಗೂ ಊರವರು ಪಾಲ್ಗೊಂಡಿದ್ದರು.




.jpg)
