ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆ ಯಶಸ್ವಿಗಳಿಸಲು ಬದಿಯಡ್ಕ ವಲಯ ಸಮಿತಿ ರೂಪಿಕರಣ ಸಭೆ ಶ್ರೀ ಉದನೇಶ್ವರ ಕ್ಷೇತ್ರದ ಸಭಾಭವನದಲ್ಲಿ ಜರಗಿತು.
ಶ್ರೀಕ್ಷೇತ್ರದ ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು ಅಧ್ಯಕರನ್ನಾಗಿ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರುಗಳುಗಳಾಗಿ ವಸಂತಿ ಟೀಚರ್, ಉದಯ ಕುಮಾರ್ ಬದಿಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅನಂತಕುಮಾರ್ ಬರ್ಲ, ಕಾರ್ಯದರ್ಶಿಯಾಗಿ ಭಾಸ್ಕರ ಪೆರಡಾಲ, ಗಣೇಶ್ ಭಟ್ ಹಾಗೂ 15 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟರಮಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದರು. ಪೆರಡಾಲ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಆಡಳಿತ ಮಂಡಳಿ ಸದಸ್ಯ ಕೃಷ್ಣ ಬದಿಯಡ್ಕ, ಜಗದೀಶ ಪೆರಡಾಲ, ಪಿ ಜಿ ಚಂದ್ರಹಾಸ ರೈ ಮಾತೃ ಸಮಿತಿ ಗೌರವ ಅಧ್ಯಕ್ಷೆ ವಸಂತಿ ಟೀಚರ್, ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಮಾತನಾಡಿದರು. ಅನಿತಾ ಟೀಚರ್, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಸದಸ್ಯರುಗಳು ಯುವ ಸಮಿತಿ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು. ಡಾ.ಶ್ರೀನಿಧಿ ಸರಳಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಕೋಶಧಿಕಾರಿ ಸೂರ್ಯನಾರಾಯಣ ಬಿ ವಂದಿಸಿದರು.




.jpg)
