ಉಪ್ಪಳ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಅಂಗಮಾಲಿಯಲ್ಲಿ ಜೂನ್ 15,16,17ರಂದು ನಡೆಯಲಿರುವ ಫೋಟೋಫೆಸ್ಟ್ 2023 ಪ್ರದರ್ಶನ ಮತ್ತು ಮಾರಾಟ ಮೇಳದ ವಾಹನ ಪ್ರಚಾರ ಜಾಥಾಕ್ಕೆ ಉಪ್ಪಳದಲ್ಲಿ ಸ್ವಾಗತವನ್ನು ನೀಡಲಾಯಿತು.
ಎಕೆಪಿಎ ಕುಂಬಳೆ ವಲಯದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕೋಶಾಧಿಕಾರಿ ವೇಣು ವಿವಿ ಉದ್ಘಾಟಿಸಿದರು. ಕುಂಬಳೆ ವಲಯ ಅಧ್ಯಕ್ಷ ಸುರೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ, ರಾಜ್ಯ ಮಹಿಳಾ ವಿಭಾಗದ ಸಂಯೋಜಕ ಹರೀಶ್ ಪಾಲಕುನ್ನು, ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ, ರಾಜ್ಯ ಸಮಿತಿ ಸದಸ್ಯ ಎನ್.ಎ.ಭರತನ್, ಜಿಲ್ಲಾ ಪಿಆರ್‍ಒ ಗೋವಿಂದನ್ ಚಂಗರಂಗಾಡು, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಶೃಂಗಾರ್, ನೇಚರ್‍ಕ್ಲಬ್ ಸಂಯೋಜಕ ದಿನೇಶ್ ಇನ್ಸೈಟ್, ಅಶೋಕನ್ ಪೊಯಿನಾಚಿ, ಪ್ರಜಿತ್, ಸುಕು ಸ್ಮಾರ್ಟ್, ಸುನಿಲ್ ಕುಂಬಳೆ, ಸಂಜೀವ್ ರೈ, ಸುನಿಲ್ ಕುಮಾರ್ ಪಿ.ಟಿ., ಕಾಞಂಗಾಡು ವಲಯ ಅಧ್ಯಕ್ಷ ಸಂತೋಷ್, ಜಿತೇಶ್ ಮಾತನಾಡಿದರು. ಕುಂಬಳೆ ವಲಯ ಕಾರ್ಯದರ್ಶಿ ನಿತ್ಯ ಪ್ರಸಾದ್ ಸ್ವಾಗತಿಸಿ, ರಾಮಚಂದ್ರ ವಂದಿಸಿದರು. ಬದಿಯಡ್ಕ, ಕುಂಬಳೆ, ಉಪ್ಪಳ ಘಟಕಗಳ ಸದಸ್ಯರು ಪಾಲ್ಗೊಂಡಿದ್ದರು.




.jpg)
