HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳಿಂದ ಕೇರಳದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ನಿರ್ಣಯಿಸಲು ಹಸಿರು ಲೆಕ್ಕಪರಿಶೋಧನೆ

              ತಿರುವನಂತಪುರ: ರಾಜ್ಯಾದ್ಯಂತ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಂಡ ಕ್ರಮಗಳನ್ನು ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರವು ಸಾರ್ವಜನಿಕ ಹಸಿರು ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಜೂನ್ 12 ರಿಂದ ಈ ಪರಿಶೋಧನೆ ಪ್ರಾರಂಭಿಸಲಾಗುವುದು, ಮಾರ್ಚ್ 2024 ರ ವೇಳೆಗೆ ಕೇರಳವನ್ನು ಸಂಪೂರ್ಣ ಕಸ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನವಾದ ‘ಮಾಲಿನ್ಯ ಮುಕ್ತಂ ನವ ಕೇರಳಂ’ ಪ್ರಾರಂಭವಾದ ಮೂರು ತಿಂಗಳ ನಂತರ ಆಡಿಟ್ ಅನ್ನು ನಡೆಸಲಾಗುತ್ತಿದೆ.

          ಸ್ಥಳೀಯಾಡಳಿತ ಸಂಸ್ಥೆಗಳು ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿಗಳನ್ನು ರಚಿಸುವಂತೆ ಎಲ್‍ಎಸ್‍ಜಿ(ಲೋಕಲ್ ಸೆಲ್ಪ್ ಗವರ್ನ್ ಮೆಂಟ್) ಇಲಾಖೆ ಆದೇಶ ಹೊರಡಿಸಿದ್ದು, ಇದರಲ್ಲಿ ಸ್ಥಳೀಯ ಸಂಘಗಳು, ವ್ಯಾಪಾರ ಸಂಸ್ಥೆಗಳು, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಎಂಎನ್‍ಆರ್‍ಇಜಿಎಸ್ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಹಸಿರು ರಾಯಭಾರಿಗಳು, ಎನ್‍ಎಸ್‍ಎಸ್ ಘಟಕಗಳು ಮತ್ತು ಯುವಕರು ಪ್ರಚಾರಕರಾಗಿ ಭಾಗವಹಿಸಲಿರುವರು. ಸಾರ್ವಜನಿಕ ಲೆಕ್ಕಪರಿಶೋಧನೆಯು ಮನೆಗಳು ಮತ್ತು ಸಂಸ್ಥೆಗಳಲ್ಲಿ ಮೂಲ ಮಟ್ಟದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಪರಿಚಯಿಸಲು ಸ್ಥಳೀಯಾಡಳಿತ  ಸಂಸ್ಥೆಗಳು ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸುತ್ತದೆ. ಜೈವಿಕ ವಿಘಟನೀಯವಲ್ಲದ ತ್ಯಾಜ್ಯದ ಸಂಗ್ರಹಣೆ ಮತ್ತು ವ್ಯಾಪ್ತಿ, ಮೂಲದಲ್ಲಿ ತ್ಯಾಜ್ಯವನ್ನು 100 ಶೇ. ಪ್ರತ್ಯೇಕಿಸುವುದು ಇತ್ಯಾದಿ ಒಳಗೊಂಡಿದೆ.

          ಯೋಜನೆ ಪ್ರಾರಂಭವಾದಾಗಿನಿಂದ, ಸ್ಥಳೀಯಾಡಳಿತ ಸಂಸ್ಥೆಗಳು ಸಂಗ್ರಹವಾದ ಕಸವನ್ನು ತೆರವುಗೊಳಿಸಲು ಕೈಗೊಂಡ ಉಪಕ್ರಮ, ಜಲಮೂಲಗಳನ್ನು ಸ್ವಚ್ಛಗೊಳಿಸಲು ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಮನೆ-ಮನೆಗಳಿಂದ ಸಂಗ್ರಹಿಸಲು ಪ್ರಾರಂಭಿಸಿವೆ. ಸಾರ್ವಜನಿಕ ಲೆಕ್ಕಪರಿಶೋಧನೆಯಲ್ಲಿ ಭಾಗವಹಿಸಲು ಬಯಸುವವರಿಗೆ ಅವಕಾಶವನ್ನು ನೀಡಲಾಗುವುದು ಮತ್ತು ಯುವಕರಿಗೆ ಆದ್ಯತೆ ನೀಡಲಾಗುವುದು. ಲೆಕ್ಕಪರಿಶೋಧನಾ ಸಮಿತಿಗಳು ಮಾದರಿ ಸಮೀಕ್ಷೆಗಳನ್ನು ನಡೆಸುತ್ತವೆ ಮತ್ತು ಮಾರ್ಚ್ 31 ಮತ್ತು ಜೂನ್ 5 ರ ನಡುವೆ ಸಾಮಾಜಿಕ ಲೆಕ್ಕಪರಿಶೋಧನೆಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳ ಕುರಿತು ವಿವರಗಳನ್ನು ಸಂಗ್ರಹಿಸುತ್ತವೆ ಎಂದು ಎಲ್‍ಎಸ್‍ಜಿಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            ಕೊಚ್ಚಿಯ ಬ್ರಹ್ಮಪುರಂ ಬೆಂಕಿ ಅವಘಡದ ನಂತರ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಸರಿಯಾದ ಆದ್ಯತೆ ನೀಡದ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಮೇಲೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಮೇಲ್ವಿಚಾರಣೆಗಾಗಿ ಹೈಕೋರ್ಟ್ ಮೂವರು ಅಮಿಕಸ್ ಕ್ಯೂರಿಗಳನ್ನು ನೇಮಿಸಿದೆ.

          ರಾಜ್ಯವು ಎದುರಿಸುತ್ತಿರುವ ತ್ಯಾಜ್ಯ ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆಯ ಮೊದಲ ಹಂತವು ಸೋಮವಾರ (ಜೂನ್ 5) ಮುಕ್ತಾಯಗೊಳ್ಳಲಿದೆ.

          ಎಲ್‍ಎಸ್‍ಜಿಡಿ ಇಲಾಖೆಯು ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2016 ಅನ್ನು ಜಾರಿಗೊಳಿಸಲು ಜಾರಿ ಸ್ಕ್ವಾಡ್‍ಗಳನ್ನು ರಚಿಸಿದೆ. ಇದುವರೆಗಿನ ಅಭಿಯಾನವು ಯಶಸ್ವಿಯಾಗಿದೆ ಮತ್ತು ಹಂತಗಳು ಎರಡು ಮತ್ತು ಮೂರು ನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಈ ವೇಗವನ್ನು ಮುಂದುವರಿಸುವುದು ಗುರಿಯಾಗಿದೆ. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸೋಮವಾರ ಸ್ಥಳೀಯಾಡಳಿತ ಸಂಸ್ಥೆಗಳು ಹಸಿರು ಸಭೆ ನಡೆಸಲಿವೆ. ಸ್ಥಳೀಯಾಡಳಿತ ಸಂಸ್ಥೆಗಳು ಕಳೆದ ಮೂರು ತಿಂಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲಿವೆ. ವರದಿಗಳನ್ನು ಪರಿಶೀಲಿಸಲಾಗುವುದು ಮತ್ತು ಹಿಂದುಳಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಭಿಯಾನದ ಎರಡನೇ ಹಂತದ ಭಾಗವಾಗಿ ಮುಂದಿನ ಮೂರು ತಿಂಗಳಲ್ಲಿ ಗುರಿಗಳನ್ನು ಸಾಧಿಸಲು ಕಾರ್ಯಗತಗೊಳಿಸಲಾಗುವುದು ಎಂದು ಎಲ್‍ಎಸ್‍ಜಿಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

        ಈವರೆಗೆ ಕಳೆದ  ಮಾರ್ಚ್ 23 ಮತ್ತು ಜೂನ್ 2 ರ ನಡುವೆ, ಜಾರಿ ದಳಗಳು 10,064 ತಪಾಸಣೆಗಳನ್ನು ನಡೆಸಿವೆ ಮತ್ತು 3,083 ಜನರಿಗೆ ನೋಟಿಸ್ ನೀಡಿವೆ ಮತ್ತು 113 ಟನ್ ನಿμÉೀಧಿತ ಉತ್ಪನ್ನಗಳನ್ನು ವಶಪಡಿಸಿಕೊಂಡಿವೆ. ಜಾರಿ ದಳ ಇದುವರೆಗೆ 1.19 ಕೋಟಿ ರೂಪಾಯಿ ದಂಡ ವಿಧಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries