ಕಾಸರಗೋಡು: ರಾಜ್ಯ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಜಿಲ್ಲೆಯಲ್ಲಿ ಬನಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ 2023-24ನೇ ಸಾಲಿನಲ್ಲಿ ಆರ್ಥಿಕ ಸಹಾಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಸಂರಕ್ಷಿತ ಬನಗಳ ಅರಣ್ಯೀಕರಣ ಮತ್ತು ಜೀವವೈವಿಧ್ಯ ಸಂರಕ್ಷಣಾ ಕ್ರಿಯಾ ಯೋಜನೆಯನ್ವಯ ಧನಸಹಾಯವನ್ನು ಮೀಸಲಿಡಲಾಗಿದೆ. ಅರ್ಜಿಯೊಂದಿಗೆ ಆಯಾ ಬನಗಳ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳು ಮತ್ತು ನಿಗದಿತ ನಮೂನೆಯಲ್ಲಿ ಬನಗಳ ಸಂರಕ್ಷಣೆಗಾಗಿ ಕ್ರಿಯಾ ಯೋಜನೆಗಳನ್ನು ನೀಡಬೇಕು. ಯೋಜನೆಯನ್ವಯ ಈ ಹಿಂದೆ ಆರ್ಥಿಕ ಸಹಾಯ ಪಡೆದಿದ್ದಲ್ಲಿ, ಎರಡನೇ ಬಾರಿಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಅರ್ಜಿಗಳನ್ನು ಜುಲೈ 31 ರೊಳಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ, ಉದಯಗಿರಿ, ವಿದ್ಯಾನಗರಿ ಕಚೇರಿಗೆ ತಲುಪಿಸಬೇಕು.
ಅರ್ಜಿ ನಮೂನೆ ಮತ್ತು ಮಾಹಿತಿಗಾಗಿ ಕಾಸರಗೋಡಿನ ಉದಯಗಿರಿ ಅಥವಾ ಹೊಸದುರ್ಗ ಸಾಮಾಜಿಕ ಅರಣ್ಯ ವಲಯದಲ್ಲಿರುವ ಸಾಮಾಜಿಕ ಅರಣ್ಯ ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ನಮೂನೆಯು ಕೇರಳ ಅರಣ್ಯ ಇಲಾಖೆಯ ವೆಬ್‍ಸೈಟ್‍ನಲ್ಲಿಯೂ ಲಭ್ಯವಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994-255234)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

