ಕಾಸರಗೋಡು: ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡ ಕೆ.ವಿದ್ಯಾ ಹಾಗೂ ಪಿ.ಎಂ ಆರ್ಷ ಅವರನ್ನು ಬಂಧಿಸುವ ಬದಲು ಹಗರಣ ಬಯಲಿಗೆಳೆದ ಕೆಎಸ್‍ಯು ರಾಜ್ಯಾಧ್ಯಕ್ಷ ಅಲೋಶಿಯಸ್ ಕ್ಸೇವಿಯರ್, ಖಾಸಗಿ ವಾಹಿನಿ ವರದಿಗಾರ್ತಿ ಖಿಲಾ ನಂದಕುಮಾರಿ, ಕೆಎಸ್ಯು ಮಹಾರಾಜಾಸ್ ಕಾಲೇಜು ವಿಭಾಗದ ಪದಾಧಿಕಾರಿಗಳ ಮೇಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿರುವ ಪೆÇಲೀಸರ ಕ್ರಮ ಪ್ರಜಾಸತ್ತಾತ್ಮಕ ಕೇರಳಕ್ಕೆ ನಾಚಿಕೆಗೇಡು ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ತಿಳಿಸಿದ್ದಾರೆ.
ಅವರು ಸರ್ಕಾರಿ ಕೆಲಸ ಗಿಟ್ಟಿಸಲು ಎಸ್‍ಎಫ್‍ಐ ಮಾಜಿ ನೇತಾರೆ ಕೆ. ವಿದ್ಯಾ ಹಾಗೂ ಆರ್ಷ ನಡೆಸಿರುವ ವಂಚನೆ ಮತ್ತು ಪ್ರಕರಣ ಬುಡಮೇಲುಗೊಳಿಸಲು ಸುಳ್ಳು ಕೇಸು ದಾಖಲಿಸುತ್ತಿರುವ ಸರ್ಕಾರದ ಧೋಧರಣೆ ಖಂಡಿಸಿ ಕೆಎಸ್‍ಯು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಪಿಣರಾಯಿ ವಿಜಯನ್ ಎರಡನೇ ಆಡಳಿತದಲ್ಲಿ ಸಿಪಿಎಂ ಮತ್ತು ಎಸ್‍ಎಫ್‍ಐ ಕಾರ್ಯಕರ್ತರು ಹಿಂಬಾಗಿಲಿನ ಮೂಲಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ನೇಮಕಾತಿ ಪಡೆಯುತ್ತಿದ್ದಾರೆ. , ಉನ್ನತ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧೆಡೆ ವಂಚನೆ ನಡೆಸಿ ಸರ್ಕಾರದ ಆಶ್ರಯದಲ್ಲಿ ಕಳೆಯುತ್ತಿರುವ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು. ಎಸ್.ಪಿ ಕಚೇರಿ ಎದುರು ಕೆ.ವಿದ್ಯಾಳ ಲುಕೌಟ್ ನೋಟೀಸು ಹಚ್ಚಲು ಕೆಎಸ್‍ಯು ಕಾರ್ಯಕರ್ತರು ನಡೆಸಿದ ಯತ್ ಪೊಲೀಸರು ವಿಫಲಗೊಳಿಸಿದರು.
ಕೆಎಸ್‍ಯು ಕಾಸರಗೋಡು ಜಿಲ್ಲಾಧ್ಯಕ್ಷ ಜಾವೇದ್ ಪುತ್ತೂರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವಾಸ್ ಉಣ್ಣಿಯಾಡನ್, ಸಾಜಿದ್ ಮುವ್ವಲ್, ಮನಾಫ್ ನುಳ್ಳಿಪ್ಪಾಡಿ, ನಿತಿನ್ ಇರಿಯಣ್ಣಿ, ಆದರ್ಶ್, ರಾಹುಲ್, ಶಿಲ್ಪಾ, ಮೆಲ್ವಿನಿ, ಜಿಷ್ಣು ಉಪಸ್ಥಿತರಿದ್ದರು.

