ಕಾಸರಗೋಡು : ಚೆಮ್ನಾಡ್ ಗ್ರಾಮ ಪಂಚಾಯಿತಿ ವಾರ್ಷಿಕ ಯೋಜನೆ 2022-23ರ ಮೀನುಗಾರರ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಮತ್ತು ಪೀಠೋಪಕರಣಗಳನ್ನು ವಿತರಿಸುವ ಕಾರ್ಯಕ್ರಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.
ಗ್ರಾ.ಪಂ.ಅಧ್ಯಕ್ಷೆ ಸುಫೈಜಾ ಅಬೂಬಕರ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿದರು. ವಿವಿಧ ಕೋರ್ಸ್‍ಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ 11 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಹಾಗೂ 47 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೀಠೋಪಕರಣ ವಿತರಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಮನ್ಸೂರ್ ಕುರಿಕಲ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಆಯೇಷಾ ಅಬೂಬಕ್ಕರ್, ಆರ್. ಗಂಗಾಧರನ್, ಬ್ಲಾಕ್ ಪಂಚಾಯಿತಿ ಸದಸ್ಯ ಕಲಾಭವನ್ ರಾಜು, ಪಂಚಾಯಿತಿ ಸದಸ್ಯರಾದ ಅಹ್ಮದ್ ಕಲ್ಲಟ್ರ, ರಾಜನ್ ಕೆ.ಪೆÇಯಿನಾಚಿ, ಧನ್ಯದಾಸ್, ಕೆ.ಕೃಷ್ಣನ್, ಸಹಾಯಕ ಕಾರ್ಯದರ್ಶಿ ಎಂ.ಕೆ.ಪ್ರದೀಶ್, ರಮ್ಯಶ್ರೀ ಉಪಸ್ಥಿತರಿದ್ದರು.


