ಕಾಸರಗೋಡು: ನೆಹರು ಯುವ ಕೇಂದ್ರ ಕಾಸರಗೋಡು, ಸರ್ಕಾರಿ ಕಾಲೇಜು ಕಾಸರಗೋಡು ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಯುವ ಉತ್ಸವ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಜರುಗಿತು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಯುವ ಉತ್ಸವ್ ಉದ್ಘಾಟಿಸಿದರು. ಶಾಸಕ ಎನ್. ಎ. ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಾಲೇಜು ಪ್ರಾಂಶುಪಾಲ ಎ. ಎಲ್. ಅನಂತ ಪದ್ಮನಾಭ, ನೆಹರೂ ಯುವ ಕೇಂದ್ರದ ರಾಜ್ಯ ಸಂಚಾಲಕ ಎಂ. ಅನಿಲ್‍ಕುಮಾರ್, ಸರ್ಕಾರಿ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಕೆ. ಆಶಾಲತಾ ಉಪಸ್ಥಿತರಿದ್ದರು. ನೆಹರೂ ಯುವಕೇಂದ್ರದ ಕಾಸರಗೋಡು ಜಿಲ್ಲಾ ಅಧಿಕಾರಿ ಪಿ. ಅಖಿಲ್ ಸ್ವಾಗತಿಸಿದರು. ನೆಹರೂ ಯುವಕೇಂದ್ರದ ಎಪಿಎಸ್‍ಟಿ ಎಂ.ಅನ್ನಮ್ಮ ವಂದಿಸಿದರು.





