ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಭಾಗವಾಗಿ ಉದ್ಯಮಿ ಧಾರ್ಮಿಕ ಮುಂದಾಳು ಮಧುಸೂಧನ್ ಆಯರ್ ಅವರನ್ನು ಭೇಟಿಯಾಗಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಗಳ ಬಗ್ಗೆ ವಿವರಿಸಿ ವಿಜ್ಞಾಪನ ಪತ್ರ ನೀಡಲಾಯಿತು.
ಕ್ಷೇತ್ರದ ಜೀರ್ಣೋದ್ಧಾರಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಜೀರ್ಣೋದ್ಧಾರ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಟ್ರಸ್ಟಿ ಜಗದೀಶ ಪೆರಡಾಲ, ಮಾತೃ ಸಮಿತಿ ಅಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಪದಾಧಿಕಾರಿಗಳಾದ ಗಣೇಶ್ ಭಟ್, ಪ್ರೊ.ಎ. ಶ್ರೀನಾಥ ಕಾಸರಗೋಡು, ಅಗಲ್ಪಾಡಿ ಗೋಪಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಾಬು ಮಾಸ್ತರ್, ಪದಾಧಿಕಾರಿಗಳಾದ ರಾಜೇಶ್ ಮಾಸ್ತರ್, ಸುಧಾಮ ಪದ್ಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




.jpg)
.jpg)
