ಉಪ್ಪಳ: ಪೈವಳಿಕೆ ಪಂಚಾಯಿತಿ ಬಾಯಾರಿನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಬೆಂಗಳೂರಿನಿಂದ ಪತ್ತೆಹಚ್ಚಿ ಕರೆತರಲಾಗಿದೆ. ಬಾಯಾರು ಅನಂತಗಿರಿನಿವಾಸಿ ಗೋಪಾಲ ನಾಯಕ್ ಎಂಬವರ ಪುತ್ರ, ಅಡ್ಯನಡ್ಕ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ಪತ್ತೆಯಾದ ವಿದ್ಯಾರ್ಥಿ.
ಭಾನುವಾರ ನೆರೆಮನೆಗೆ ತೆರಳುವುದಾಗಿ ತಿಳಿಸಿ ಸ್ಕೂಟಿಯಲ್ಲಿ ಹೊರಟಿದ್ದ ಈತ ವಾಪಾಸು ಬಾರದಿರುವುದರಿಂದ ಹುಡುಕಾಟದ ಮಧ್ಯೆ ಈನನ ಸ್ಕೂಟರ್ ಬಳ್ಳೂರು ಬಸ್ ನಿಲ್ದಾಣ ವಠಾರದಲ್ಲಿ ಕಂಡು ಬಂದಿತ್ತು. ಈ ಬಗ್ಗೆ ಮನೆಯವರು ಮಂಜೇಶ್ವರ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಈತ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅಲ್ಲಿದ್ದ ಸಂಬಂಧಿಕರ ಮೂಲಕ ಸಂಪರ್ಕಿಸಿ ವಿದ್ಯಾರ್ಥಿಯನ್ನು ಊರಿಗೆ ಕರೆತರಲಾಯಿತು. ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆತ್ತರ ಜತೆ ಕಳುಹಿಸಿಕೊಡಲಾಯಿತು.





