ತಿರುವನಂತಪುರ: ಮುಂಗಾರು ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಜ್ವರ ಪೀಡಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಹಲವಾರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಳೆಗಾಲವಾಗಿರುವುದರಿಂದ ಜ್ವರ, ಡೆಂಗ್ಯೂ ಜ್ವರ, ಇಲಿ ಜ್ವರ, ಚಿಕನ್ ಗುನಿಯಾ ಹರಡುವ ಸಾಧ್ಯತೆ ಹೆಚ್ಚಿದೆ.
ನಿನ್ನೆಯμÉ್ಟೀ ರಾಜ್ಯದಲ್ಲಿ 10,321 ಮಂದಿ ಜ್ವರದಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತಿರುವನಂತಪುರಂನಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ತಿರುವನಂತಪುರಂನಲ್ಲಿ 1314, ಕೊಲ್ಲಂ-856, ಪತ್ತನಂತಿಟ್ಟ-381, ಇಡುಕ್ಕಿ-452, ಕೊಟ್ಟಾಯಂ-486, ಆಲಪ್ಪುಳ-746, ಎರ್ನಾಕುಲಂ-926, ತ್ರಿಶೂರ್-520, ಪಾಲಕ್ಕಾಡ್-768, ಮಲಪ್ಪುರಂ-1260, ಕೋಝಿಕೋಡ್-868, ವಯನಾಡ್ನ್-597, ಕಣ್ಣೂರು 602, ಕಾಸರಗೋಡು 545 ಎಂಬಂತೆ ಜ್ವರಕ್ಕೆ ಚಿಕಿತ್ಸೆ ಪಡೆದಿರುವುದು ವರದಿಯಾಗಿದೆ.
ಮಳೆಗಾಲವಾಗಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಲವಾರು ಮುನ್ನೆಚ್ಚರಿಕೆಗಳನ್ನು ಸೂಚಿಸಿದೆ. ಜ್ವರದ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆಗಳನ್ನು ಪರಿಶೀಲನೆ, ವೈದ್ಯರ ಸೂಚನೆ ಇಲ್ಲದೆ ನೀಡಬಾರದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು.





