ತಿರುವನಂತಪುರಂ: ಸರ್ಕಾರದ ಆನ್‍ಲೈನ್ ಸೇವೆಗಳನ್ನು ವ್ಯಾಪಕ ರೀತಿಯಲ್ಲಿ ಬುಡಮ|ಏಲುಗೊಳಿಸುತ್ತಿರುವುದು ಕಂಡು ಬಂದಿದೆ.
ಅಧಿಕಾರಿಗಳು ಇಂತಹ ಸೇವೆಗಳನ್ನು ವಿವಿಧ ರೀತಿಯಲ್ಲಿ ಹಾಳು ಮಾಡುತ್ತಿದ್ದಾರೆ ಮತ್ತು ಇದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ವಿಜಿಲೆನ್ಸ್ ಪತ್ತೆಮಾಡಿದೆ. ಕೂಡಲೇ ಎಲ್ಲ ಇಲಾಖೆಗಳಲ್ಲಿ ಸೇವಾ ಹಕ್ಕು ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಆನ್ ಲೈನ್ ಸೇವೆ ಬುಡಮೇಲುಗೊಳಿಸುವ ಅಧಿಕಾರಿಗಳಿಗೆ ಶಿಸ್ತು ಕ್ರಮದ ಜತೆಗೆ ದಂಡ ವಿಧಿಸಬೇಕು ಎಂದು ವಿಜಿಲೆನ್ಸ್ ತಿಳಿಸಿದೆ. ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಅವರು ಗೃಹ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸಾವಿರಾರು ಸರ್ಕಾರಿ ಸೇವೆಗಳು ಆನ್‍ಲೈನ್‍ನಲ್ಲಿ ಲಭ್ಯವಿದೆ. ಆದರೆ ಹಲವು ಕಚೇರಿಗಳಲ್ಲಿ ನೇರ ಹಣ ಪಾವತಿ ಮಾಡಲಾಗುತ್ತಿದೆ. ಹಣದ ವ್ಯವಹಾರಗಳೆಲ್ಲವೂ ಡಿಜಿಟಲ್ ಆಗಿರಬೇಕು ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಈ ನಿಟ್ಟಿನಲ್ಲಿ ಇಲಾಖೆ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಜಾಗೃತ ದಳದ ವರದಿ ಪ್ರಕಾರ, ಜನರನ್ನು ಕಚೇರಿಗೆ ಕರೆಸಿ ಲಂಚಕ್ಕೆ ಅವಕಾಶ ಕಲ್ಪಿಸುವ ಮೂಲಕ ಉದ್ದೇಶಪೂರ್ವಕವಾಗಿ ಆನ್‍ಲೈನ್ ಅರ್ಜಿಯನ್ನು ವಿಳಂಬಗೊಳಿಸಲಾಗುತ್ತಿದೆ. ಅನೇಕ ಅರ್ಜಿಗಳನ್ನು ಕ್ಷುಲ್ಲಕ ಕಾರಣಗಳಿಗಾಗಿ ತಿರಸ್ಕರಿಸಲಾಗುತ್ತದೆ ಮತ್ತು ಜನರನ್ನು ಕಚೇರಿಗೆ ಕರೆಸಲಾಗುತ್ತಿದೆ ಮತ್ತು ಇದು ಭ್ರμÁ್ಟಚಾರಕ್ಕೆ ಕಾರಣವಾಗುತ್ತದೆ. ಬಳಸಲು ಕಷ್ಟಕರವಾದ ಅಪ್ಲಿಕೇಶನ್ ಮತ್ತು ಸಂಕೀರ್ಣವಾದ ಅಪ್ಲಿಕೇಶನ್ ಸ್ವರೂಪವು ಜನರನ್ನು ಆನ್‍ಲೈನ್ ವ್ಯವಸ್ಥೆಯಿಂದ ದೂರಗೊಳಿಸುತ್ತದೆ ಮತ್ತು ವೈಯಕ್ತಿಕವಾಗಿ ಕಚೇರಿಗೆ ಭೇಟಿ ನೀಡಲು ಅವರನ್ನು ಪ್ರೋತ್ಸಾಹಿಸುತ್ತದೆ. ಅರ್ಜಿಯನ್ನು ಪರಿಶೀಲಿಸಲು ಅಥವಾ ತಪ್ಪುಗಳನ್ನು ಸರಿಪಡಿಸಲು ಮೇಲಧಿಕಾರಿಗಳ ವೈಫಲ್ಯವೂ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ವರದಿ ಎತ್ತಿ ತೋರಿಸುತ್ತದೆ.





