ತ್ರಿಶೂರ್: ಗುರುವಾಯೂರ್ ದೇವಸ್ಥಾನಕ್ಕೆ ಚಿನ್ನದ ಗಿಂಡಿ(ತೀರ್ಥೋದಕ ಪಾತ್ರೆ)ಯನ್ನು ಕಾಣಿಕೆಯಾಗಿ ನೀಡಲಾಗಿದೆ. ದೇವಸ್ಥಾನಕ್ಕೆ ಚೆನ್ನೈ ಮೂಲದ ಬಿಂದು ಗಿರಿ ಎಂಬವರು ನೂರು ಪವನ್ ಚಿನ್ನದ ಗಿಂಡಿ ಹರಕೆಯಾಗಿ ನೀಡಿರುವರು.
ಚಿನ್ನದ ಗಟ್ಟಿ 770 ಗ್ರಾಂ ತೂಗುತ್ತದೆ. ಇದರ ಬೆಲೆ 53 ಲಕ್ಷ ರೂ. ರಾಮಾಯಣ ಮಾಸದ ಆರಂಭದಂದು ಗುರುವಾಯೂರಪ್ಪನಿಗೆ ಚಿನ್ನದ ಗಿಂಡಿ ಕಾಣಿಕೆಯಾಗಿ ಅರ್ಪಿಸಲಾಯಿತು. ಸಮರ್ಪಣಾ ಸಮಾರಂಭದಲ್ಲಿ ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ಪಿ.ಸಿ.ದಿನೇಶನ್ ನಂಬೂದಿರಿಪಾಡ್ ಮತ್ತು ಉರಾಳನ್ ಮಲ್ಲಿಶೇರಿ ಪರಮೇಶ್ವರನ್ ನಂಬೂದಿರಿಪಾಡ್ ಉಪಸ್ಥಿತರಿದ್ದರು.
ಇತ್ತೀಚೆಗμÉ್ಟೀ ಗುರುವಾಯೂರಪ್ಪನ ಅಚ್ಚುಮೆಚ್ಚಿನ ಕೃಷ್ಣನಾಟ್ಟಂ ಕಲೆಯನ್ನು ವಿಶ್ವರೂಪ ಕಿರೀಟಕ್ಕೆ ಅರ್ಪಿಸಲಾಯಿತು. ತಿರುವನಂತಪುರಂ ಮೂಲದ ರಾಜ್ಕøಷ್ಣನ್ ಆರ್ ಪಿಳ್ಳೈ ಅವರು ವಿಶ್ವರೂಪ ಕಿರೀಟವನ್ನು ಭಗವಂತನಿಗೆ ಅರ್ಪಿಸಿದರು. ಕೃಷ್ಣನಾಟಕ್ಕೆ ಸಂಬಂಧಿಸಿದಂತೆ ಭಕ್ತರು ವಿಶ್ವರೂಪಂ ಕಾಣಿಕೆಯನ್ನು ಅರ್ಪಿಸುತ್ತಾರೆ. ಭಕ್ತನು ಭಗವಂತನ ವಸ್ತ್ರಗಳನ್ನು ಮತ್ತು ಕಿರೀಟವನ್ನು ಧರಿಸಿ ಭಗವದ್ ಸನ್ನಿಧಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುವುದು ಈ ಹರಕೆಯ ವಿಶೇಷತೆಯಾಗಿದೆ.





