ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ 'ಜತೆಗಿದೆ ಆಧಾರ್' ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ವೆಸ್ಟ್ ಎಳೇರಿ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೆರವೇರಿಸಿದರು. ಭೀಮನಡಿ ಅಕ್ಷಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಸ್ಟ್‍ಎಳೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಮುಖ್ಯ ಅತಿಥಿಗಳಾಗಿ ಭಾಘವಹಿಸಿದ್ದರು. ಗ್ರಾಪಂ ಸದಸ್ಯ ಇ.ಟಿ.ಜೋಸ್, ಅಕ್ಷಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಕಪಿಲ್ ದೇವ್, ಅಕ್ಷಯ ಬ್ಲಾಕ್ ಸಂಯೋಜಕಿ ಗ್ರೇಸಿ ಥಾಮಸ್, ಎ.ವಿ.ಬಾಬು, ಯುಐಡಿ ಅಡ್ಮಿನ್ ಕೆ.ನಿತ್ಯ ಮೊದಲಾದವರು ಉಪಸ್ಥಿತರಿದ್ದರು. ಎ.ವಿ. ಬಾಬು ಸ್ವಾಗತಿಸಿದರು. ಅಕ್ಷಯ ಉದ್ಯಮಿ ಎ.ವಿ. ಶುಭಾ ವಂದಿಸಿದರು.
ಶಿಬಿರದಲ್ಲಿ 63 ಮಂದಿ ಭಾಗವಹಿಸಿದ್ದರು. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಿಂದ ಪ್ರತಿ ಪ್ರದೇಶದಲ್ಲಿ ಯೋಜನೆಯ ಬಗ್ಗೆ ಮುಂಚಿತವಾಗಿ ಮಾಹಿತಿನೀಡಲಾಯಿತು ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಮತ್ತು ದಾಖಲೆಗಳನ್ನು ಕ್ರೋಢೀಕರಿಸಲು ಮೊದಲ ಹಂತದಲ್ಲಿ ಆಧಾರ್ ಲಭ್ಯವಾಗುವಂತೆ ಮಾಡಬೇಕು ಜತೆಗೆ ಆಧಾರ್ ತಪ್ಪುಗಳನ್ನು ಸರಿಪಡಿಸಲು ಮತ್ತು ನವೀಕರಿಸಲು 'ಜತೆಗಿದೆ ಆಧಾರ್' ಶಿಬಿರ ಯೋಜಿಸಲಾಗಿತ್ತು. ಶಿಬಿರದಲ್ಲಿಮಕ್ಕಳ ಆಧಾರ್ ಕಡ್ಡಾಯ ಬಯೋಮೆಟ್ರಿಕ್ ಪರಿಷ್ಕರಣೆಯೂ ಪೂರ್ತಿಗೊಳಿಸಲಾಗಿದೆ. ಅಲ್ಲದೆ 5 ವರ್ಷದವರೆಗಿನ ಮಕ್ಕಳಿಗೆ ಆಧಾರ್ ನೋಂದಣಿ ಮತ್ತು 10 ವರ್ಷ ಕಳೆದ ಆಧಾರ್ ಕಾರ್ಡುಗಳ ನವೀಕರಣ ವಯವಸ್ಥೆಯೂ ಶಿಬಿರದಲ್ಲಿ ಲಭ್ಯವಿರಲಿದೆ.




