ಕಾಸರಗೋಡು : ವಿದ್ಯಾರ್ಥಿಗಳ ನಾಗರಿಕ ಸೇವಾ ಕನಸು ನನಸಾಗಿಸುವ ನಿಟ್ಟಿನಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ವತಿಯಿಂದ ನಾಗರಿಕ ಸೇವಾ ಅಕಾಡೆಮಿ ಜು.19ರಂದು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಳಿದೆ.
ವಿಶ್ವ ವಿದ್ಯಾಲಯದ ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ನೂತನ ಅಕಾಡಮಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಕೆ.ಇನ್ಬಾಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್‍ನಂಬಿಯಾರ್, ಪ್ಲೇಸ್ ಮೆಂಟ್ ಸೆಲ್ ನಿರ್ದೇಶಕ ಪೆÇ್ರ.ಜೋಸೆಫ್ ಕೊಯಿಪಲ್ಲಿ ಮೊದಲಾದವರು ಪಾಲ್ಗೊಳ್ಳುವರು. ವಿಶ್ವವಿದ್ಯಾಲಯದ ಆಯ್ದ ವಿದ್ಯಾರ್ಥಿಗಳಿಗೆ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುವುದು. ಉಪಕುಲಪತಿಗಳ ವಿಶೇಷ ಸೂಚನೆ ಮೇರೆಗೆ ಹೊಸ ಅಕಾಡೆಮಿ ಆರಂಭಿಸಲಾಗುತ್ತಿದ್ದು, ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ವಿಶ್ವವಿದ್ಯಾನಿಲಯದ ಶಿಕ್ಷಕರ ಹೊರತಾಗಿ, ಹೊರಗಿನ ತಜ್ಞರಿಂದಲೂ ತರಗತಿ ನಡೆಸಲಾಗುವುದು. ಡೀನ್ ಅಕಾಡೆಮಿಕ್ ಪೆÇ್ರ.ಅಮೃತ್ ಜಿ ಕುಮಾರ್ ಅಧ್ಯಕ್ಷರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಆಶಾ ಲಕ್ಷ್ಮಿ ಸಂಯೋಜಕರಾಗಿ ಏಳು ಮಂದಿ ಸದಸ್ಯರ ಸಮಿತಿಯು ಅಕಾಡಮಿಯ ಮೇಲ್ವಿಚಾರಣೆ ನಡೆಸಲಿದೆ. ಪ್ರಸಕ್ತ ಎಸ್‍ಸಿ ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರ್ ಸೆಂಟರ್ ಆಫ್ ಎಕ್ಸಲೆನ್ಸ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.ನಾಗರಿಕ ಸಏವಾ ಅಕಾಡಮಿಯಲ್ಲಿ ವಿಶ್ವವಿದ್ಯಾನಿಲಯದ ಹೊರಗಿನವರಿಗೂ ಅವಕಾಶ ಕಲ್ಪಿಸಲಾಗಿದೆ.

