ಕಾಸರಗೋಡು: ಉತ್ತಮ ಶಿಕ್ಷಣ ವ್ಯವಸ್ಥೆಯಿಂದ ದೇಶದ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಲು ಸಾಧ್ಯ ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಚರ್ಚಿಸಲು ಗುರುವಾರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 'ಜ್ಞಾನೋತ್ಸವ 2023'ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಹೊಸ ಶಿಕ್ಷಣ ನೀತಿಯ ಅಡಿಪಾಯವಾಗಿದೆ. ಜ್ಞಾನ ಪಡೆಯುವುದೇ ಮಾನವ ಜೀವನದ ಗುರಿಯಾಗಿದ್ದು, ಜ್ಞಾನ ಸಂಪಾದಿಸಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ.
ವಿದ್ಯಾರ್ಥಿಗಳು ವಿಭಿನ್ನ ಪರಿಕಲ್ಪನೆಗಳನ್ನು ಕಲಿಯಲು ಅವಕಾಶಗಳನ್ನು ಹೊಂದಿರಬೇಕು. ಇದು ವಿದ್ಯಾರ್ಥಿಗಳ ಆಲೋಚನಾ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ ವಿನೂತನ ಆಲೋಚನೆಗಳನ್ನು ರೂಪಿಸುವ ಸಾಮಥ್ರ್ಯ ಹೊಂದಿರುವವರು ಮಾತ್ರ ಜಗತ್ತಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು.
ಎಐಸಿಟಿಇ ಉಪಾಧ್ಯಕ್ಷ ಡಾ.ಅಭಯ್ ಜೇರೆ, ಕೋಯಿಕ್ಕೋಡ್ ಎನ್.ಐ.ಟಿ. ನಿರ್ದೇಶಕ ಪೆÇ್ರ.ಪ್ರಸಾದ್ ಕೃಷ್ಣ, ರಾಷ್ಟ್ರೀಯ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ-ಅಲ್ಪಸಂಖ್ಯಾತರ ಶಿಕ್ಷಣ ಮೇಲ್ವಿಚಾರಣಾ ಸಮಿತಿ ಸದಸ್ಯ ಎ.ವಿನೋದ್ ಹಾಗೂ ಕೇಂದ್ರೀಯ ವಿದ್ಯಾಲಯ ಸಂಘಟನೆ ಉಪ ಆಯುಕ್ತ ಎನ್.ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಅಕಾಡೆಮಿಕ್ ಡೀನ್ ಅಮೃತ್ ಜಿ ಕುಮಾರ್ ಸ್ವಾಗತಿಸಿದರು. ಶಿಕ್ಷಣ ವಿಕಾಸ ಕೇಂದ್ರದ ರಾಜ್ಯಾಧ್ಯಕ್ಷ ಎನ್.ಸಿ.ಇಂದುಚೂಡನ್ ವಂದಿಸಿದರು.
ಕೇಂದ್ರೀಯ ವಿಶ್ವವಿದ್ಯಾನಿಲಯದ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಂರಕ್ಷಣಾ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಶಿಕ್ಷಣದ ಮೂಲಕ ಆತ್ಮನಿರ್ಭರ ಭಾರತ ಎಂಬ ಧ್ಯೇಯದೊಂದಿಗೆ ಮೂರು ದಿವಸಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಚಾರಗಳ ಪ್ರದರ್ಶನ ಮತ್ತು ಚರ್ಚೆ ನಡೆಯುವುದು. ಸುಮಾರು 50 ಆಯ್ದ ಶಾಲೆಗಳು, ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿದೆ. ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಪರಿಸರ ಕೆಲಸ, ಭಾರತೀಯ ಜ್ಞಾನ ಸಂಪ್ರದಾಯ, ಭಾಷೆ, ವೃತ್ತಿ ಕೌಶಲ್ಯ ಮತ್ತು ಸಮಗ್ರ ಮೌಲ್ಯಮಾಪನದ ಐದು ವಿಷಯಗಳಲ್ಲಿ ಅಳವಡಿಸಲಾದ ಮಾದರಿಗಳನ್ನು ಸಹ ಪ್ರದರ್ಶಿಸಲಾಗುತ್ತದೆ.




