ಕಾಸರಗೊಡು: ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಶಿಕಷಣ ಸಂಸ್ಥೆಗಳಿಗೆ ಸತತ ನಾಲ್ಕನೇ ದಿನವೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ರಜೆ ಘೋಷಿಸಿದ್ದಾರೆ. ಕಾಸರಗೋಡು ಅಲ್ಲದೆ ಕಣ್ಣೂರು, ಪತ್ತನಂತಿಟ್ಟ, ಕೋಟ್ಟಾಯಂ ಜಿಲ್ಲೆಗಳಲ್ಲೂ ಶಿಕ್ಷನ ಸಂಸ್ಥೆಗಳಿಗೆ ಯಾ ಜಿಲ್ಲಾಧಿಕಾರಿಗಳು ರಜೆ ಘೊಷಿಸಿದ್ದಾರೆ.
ಕಾಸರಗೋಡು ಜಿಲ್ಲಾದ್ಯಂತ ಹೊಳೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶ ನೆರೆನೀರಿನಿಂದಾವೃತವಾಗಿದೆ. ಕಾಸರಗೋಡು ಮಧೂರು ಸನಿಹದ ಪಟ್ಲದ ಮೊಗರ್ ಪ್ರದೇಶದಲ್ಲಿ ನೆರೆನೀರಿನಿಂದವೃತವಾದ ಪ್ರದೇಶದ ಜನರನ್ನು ಅಗ್ನಿಶಾಮಕ ದಳ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು.


