ಕಾಸರಗೋಡು: ವಿದ್ಯನಗರ ಮುಟ್ಟತ್ತೋಡಿಯ ಜವಾಹರಲಾಲ್ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ವಿಚಾರಗೋಷ್ಠಿಯ ಅಂಗವಾಗಿ ಆರೋಗ್ಯ ಮಾಹಿತಿ ಹಾಗೂ ಖ್ಯಾತ ಕವಿ ವಿ.ಸಾಂಬಶಿವ ಸಂಸ್ಮರಣಾ ಸಮಾರಂಭ ಗ್ರಂಥಾಲಯದಲ್ಲಿ ಜರುಗಿತು.
ಗ್ರಂಥಾಲಯದಲ್ಲಿ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯಲ್ಲಿ ಡಾ.ಶ್ರುತಿ ಪಂಡಿತ್ ಅವರು 'ಆರೋಗ್ಯ ಮತ್ತು ಜೀವನಶೈಲಿ ರೋಗಗಳು' ಎಂಬ ವಿಷಯದ ಕುರಿತು ತರಗತಿ ನಡೆಸಿದರು. ನಿತ್ಯ ಸೇವಿಸುವ ನಿಯಮಿತ ಆಹಾರದಿಂದ ನಮ್ಮ ಆರೋಗ್ಯ ಕಾಪಾಡಿಕೊಂಡು ಬರಲು ಸಾಧ್ಯ. ಇಂದು ನಮ್ಮ ಜೀವನ ಪದ್ಧತಿ ಅನೇಕ ಅನಾರೋಗ್ಯಗಳಿಗೆ ಕಾರಣವಾಗುತ್ತಿದೆ. ಸೇವಿಸುವ ಆಹಾರ ಮತ್ತು ಜೀವನ ಶೈಲಿಯಲ್ಲಿ ತಂದುಕೊಳ್ಳುವ ಮರ್ಪಾಡುಗಳು ಆರೋಗ್ಯವನ್ನು ಸಂರಕ್ಷಿಸಿಕೊಂಡು ಬರಲು ಸಹಕಾರಿಯಾಗುವುದಾಗಿ ತಿಳಿಸಿದರು. ಜವಾಹರಲಾಲ್ ಸಾರ್ವಜನಿಕ ಗ್ರಂಥಾಲಯದ ಅಧ್ಯಕ್ಷ ಎಂ.ಪದ್ಮಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಹೌಸಿಂಗ್ ಬೋರ್ಡ್ ಫ್ಲಾಟ್ ಮಂಜೂರಾತಿ ಸಂಘದ ಕೋಶಾಧಿಕಾರಿ ಪಿ.ಎ.ಮುಹಮ್ಮದಲಿ ಉಪಸ್ಥಿತರಿದ್ದರು. ಗ್ರಂಥಾಲಯ ಆಡಳಿತ ಸಮಿತಿ ಸದಸ್ಯರಾದ ಎ.ದಿವಾಕರನ್ ಸ್ವಾಗತಿಸಿದರು. ಎ.ಸಿ.ಮುರಳೀಧರನ್ ವಂದಿಸಿದರು.


