ಕಾಸರಗೋಡು: ಸಿಪಿಎಂ ಕಾಸರಗೋಡು ಸ್ಥಳೀಯ ಸಮಿತಿ ವತಿಯಿಂದ ಅಡ್ಕತ್ತಬೈಲ್ ಕೋಟವಳಪ್ಪು ನಿವಾಸಿ ಕೆ.ಟಿ.ಸುರೇಶ್-ಬೇಬಿ ದಂಪತಿ ಪುತ್ರ ವಿಕಲಚೇತನ ಅಪ್ಪು ಅವರಿಗೆ ನಿರ್ಮಿಸಿದ ಮನೆಯ ಕೀಲಿಕೈಯನ್ನು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹಸ್ತಾಂತರಿಸಿದರು.
ಜಿಲ್ಲಾ ಕಾರ್ಯದರ್ಶಿಎಂ.ವಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ, ಶಾಸಕ ಸಿ.ಎಚ್.ಕುಂಜಂಬು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಸುಮತಿ, ಜಿಲ್ಲಾ ಸಮಿತಿ ಸದಸ್ಯ ಟಿ.ಕೆ.ರಾಜನ್, ಏರಿಯಾ ಕಾರ್ಯದರ್ಶಿ ಕೆ.ಎ.ಮುಹಮ್ಮದ್ ಹನೀಫ, ಸಿ.ಶಾಂತಕುಮಾರಿ, ಕೆ.ಭಾಸ್ಕರನ್ ಉಪಸ್ಥಿರಿದ್ದರು. ಸ್ಥಳೀಯ ಕಾರ್ಯದರ್ಶಿ ಎಸ್.ಸುನೀಲ್ ಸ್ವಾಗತಿಸಿ, ಕೆ.ಹರಿಪ್ರಸಾದ್ ವಂದಿಸಿದರು.


