ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗುರುಪೂರ್ಣಿಮೆಯಂದು ಶ್ರೀಮಠದಲ್ಲಿ ತಮ್ಮ 20ನೇ ಚಾತುರ್ಮಾಸ್ಯ ವೃತಾಚರಣೆಯನ್ನು ಧಾರ್ಮಿಕ… ವಿಧಾನಗಳೊಡನೆ ಕೈಗೊಂಡರು. ಗಣಹೋಮ, ಶ್ರೀ ನಿತ್ಯಾನಂದ ಗುರುದೇವರಿಗೆ ಸೀಯಾಳಾಭಿಷೇಕ ಮತ್ತು ಪಂಚಾಮೃತಾಭಿμÉೀಕ ಹಾಗೂ ವ್ಯಾಸಪೂಜಾ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕುಂಬ್ಳೆಯ ವೇದಮೂರ್ತಿ ಹರಿನಾರಾಯಣ ಮಯ್ಯ ಅವರ ಪೌರೋಹಿತ್ಯದಲ್ಲಿ ನಡೆದವು. ಸಂಜೆ ಭಜನೆ ನಂತರ ಶ್ರೀ ಗುರು ಪಾದುಕಾ ಪೂಜೆ ನಡೆಯಿತು.
ಬುಧವಾರ ನಡೆದ ಸಂಜೆ ನಡೆದ ಸತ್ಸಂಗದಲ್ಲಿ ಪೂಜ್ಯರು ಆಶೀರ್ವಚ£ಗೈದು ಗುರು ತತ್ವದ ವಿಶೇಷ ಅರಿತು, ಜ್ಞಾನದ ಬೆಳಕನ್ನು ಪಡೆದು,ಹೃದಯದಲ್ಲಿ ಒಳ್ಳೆಯತನವನ್ನು ಧಾರಣೆ ಮಾಡಬೇಕು. ಧಾರ್ಮಿಕ ಪರಿಸರ ಕಟ್ಟಿ ಬೆಳೆಸಿ ಭಗವಂತನ ಭಕ್ತಿಯೊಂದಿಗೆ ಅರ್ಥಪೂರ್ಣ ಬದುಕು ನಮ್ಮದಾಗಲಿ ಎಂದು ಕರೆ ನೀಡಿದರು.
ಆಗಮಿಸಿದ ಭಕ್ತರು ಫಲಪುಷ್ಪ ಸಮರ್ಪಿಸಿ ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆದು ಧನ್ಯರಾದರು. ಆಶ್ರಮದ ಟ್ರಸ್ಟಿಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಶಶಿಧರ ಶೆಟ್ಟಿ ಗ್ರಾಮಚಾವಡಿ, ವಿಶ್ವನಾಥ್ ಬೆಂಗರೆ, ಮೋಹನದಾಸ್ ಕೊಂಡೆವೂರು ಮುಂತಾದವರು ಉಪಸ್ಥಿತರಿದ್ದರು.

.jpg)
