ಉಪ್ಪಳ: ಸಾಮಾಜಿಕ ನ್ಯಾಯ ಇಲಾಖೆಯು ತನ್ನ ಸ್ನೇಹಯಾನಂ ಯೋಜನೆ ಮೂಲಕ ವಿಕಲಚೇತನರ ನಿರ್ಗತಿಕ ತಾಯಂದಿರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಈ ಯೋಜನೆಯು ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತತೆ ಮತ್ತು ಬಹು ಅಂಗವೈಕಲ್ಯ ಹೊಂದಿರುವ ಜನರ ತಾಯಂದಿರಿಗೆ ರಾಷ್ಟ್ರೀಯ ಟ್ರಸ್ಟ್ ಆಕ್ಟ್ ಅಡಿಯಲ್ಲಿ ಖಾಯಂ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಉಚಿತ ಎಲೆಕ್ಟ್ರಿಕ್ ಆಟೋವನ್ನು ಒದಗಿಸುತ್ತದೆ.
55 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಬಡತನ ರೇಖೆಗಿಂತ ಕೆಳಗಿರುವ ವಿಧವೆಯರಾಗಿದ್ದು, ತ್ರಿಚಕ್ರ ವಾಹನ ಪರವಾನಗಿ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಆಟೋ-ರಿಕ್ಷಾಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇಬ್ಬರಿಗೆ ಆಟೋ ಲಭಿಸಲಿದೆ. ಅವರಿಗೆ ಸುಮಾರು 3,50,000 ಮೌಲ್ಯದ ಎಲೆಕ್ಟ್ರಿಕ್ ಆಟೋ ವಾಹನವನ್ನು ನೀಡಲಾಗುತ್ತದೆ. ಅವರ ಮನೆಗಳಲ್ಲಿ ಚಾಜಿರ್ಂಗ್ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗುವುದು. ಅನುಮತಿಸಲಾದ ಎಲೆಕ್ಟ್ರಿಕ್ ಆಟೋವನ್ನು ಮರುಮಾರಾಟ ಮಾಡಲಾಗುವುದಿಲ್ಲ ಅಥವಾ ವರ್ಗಾಯಿಸಲಾಗುವುದಿಲ್ಲ.
ಜಿಲ್ಲೆಯಲ್ಲಿ ಯೋಜನೆಯ ಅಂಗವಾಗಿ ಮಂಗಲ್ಪಾಡಿಯ ಫಾತಿಮಾ ತಸ್ರಿಫಾ ವಿದ್ಯುತ್ ಆಟೋರಿಕ್ಷಾದ ಮಾಲಕಿಯಾದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಎಲೆಕ್ಟ್ರಿಕ್ ಆಟೋರಿಕ್ಷಾದ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಇಲಾಖೆ ಅಧಿಕಾರಿ ಶೀಬಾ ಮುಮ್ತಾಜ್, ಹಿರಿಯ ಅಧೀಕ್ಷಕ ಎಂ.ಅಬ್ದುಲ್ಲಾ, ಕಿರಿಯ ಅಧೀಕ್ಷಕ ಪಿ.ಕೆ.ಜಯೇಶ್ ಕುಮಾರ್, ಮೊಹಮ್ಮದ್ ನೌಫಲ್ ಮತ್ತಿತರರು ಭಾಗವಹಿಸಿದ್ದರು.

.jpeg)
