ತಿರುವನಂತಪುರಂ: ರಾಜ್ಯ ಹಣಕಾಸು ಇಲಾಖೆಗೆ ಓಣಂ ಮೂಲಕ ವಿತರಿಸಲು ಕನಿಷ್ಠ 8000 ಕೋಟಿ ರೂ.ಬೇಕಾಗಿಬರಲಿದೆ. ಕೇರಳ ಸದ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ.
ಏತನ್ಮಧ್ಯೆ, ಕಲ್ಯಾಣ ಪಿಂಚಣಿ ಬಾಕಿಯಲ್ಲದೆ, ಹಬ್ಬದ ವಿಶೇಷ ಭತ್ಯ್ಯೆಗಳ ವೆಚ್ಚವೂ ಸಂಕಷ್ಟಕ್ಕೀಡುಮಾಡಲಿದೆ. ಅದಕ್ಕಾಗಿ ಈ ಮೊತ್ತವನ್ನೂ ಲೆಕ್ಕ ಹಾಕಲಾಗಿತ್ತು.
ಕೇರಳದ ಹಣಕಾಸು ಸಚಿವರು ಕೇಂದ್ರ ಹಣಕಾಸು ಸಚಿವಾಲಯಕ್ಕೆ ತುರ್ತು ಹಣಕಾಸು ಅನುಮೋದನೆ ಕೋರಿ ಮನವಿ ಸಲ್ಲಿಸಿದ್ದಾರೆ. ಓಣಂ ತನಕ ಮೂರು ತಿಂಗಳಿಗೆ ಕಲ್ಯಾಣ ಪಿಂಚಣಿ ನಿರ್ಧರಿಸಿದರೂ 1700 ಕೋಟಿ ಬೇಕಾಗುತ್ತದೆ ಎಂದು ಅಂದಾಜುಗಳು ಹೇಳುತ್ತವೆ. ಸರ್ಕಾರಿ ನೌಕರರಿಗೆ ವೇತನ ನೀಡಲು 3398 ಕೋಟಿ ರೂ. ಬೇಕಾಗಿ ಬರಲಿದೆ.
ಇದಲ್ಲದೇ ಬೋನಸ್, ಹಬ್ಬದ ಭತ್ಯೆ, ಮುಂಗಡ ಮೊತ್ತದ ಅನುದಾನ ಸೇರಿದಂತೆ ಅಪಾರ ಖರ್ಚು ಬರಬೇಕಿದೆ. ವಿವಿಧ ಇಲಾಖೆಗಳಿಗೆ ಪಾವತಿಸಬೇಕಾದ ಹಬ್ಬದ ಪ್ರಯೋಜನಗಳ ಮೊತ್ತವು ವಿಭಿನ್ನವಾಗಿರುತ್ತದೆ. ಇದರೊಂದಿಗೆ ಗುತ್ತಿಗೆದಾರರಿಗೂ ಬಾಕಿ ಹಣ ನೀಡಬೇಕು. ಸಾಲದ ಮಿತಿಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವು ಹಣಕಾಸು ವಲಯದಲ್ಲಿ ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಸೃಷ್ಟಿಸಿದೆ.


