ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ "ಮಯ ಪೊಲಿಮ" ಕಾರ್ಯಕ್ರಮದ ಯಶಸ್ವಿಗಾಗಿ ಸ್ಬಾಗತ ಸಮಿತಿ ರೂಪೀಕರಣ ಸಭೆ ಎಣ್ಮಕಜೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಕಾರ್ಯಕ್ರಮದ ರೂಪುರೇಷೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ರಮ್ಲ, ಇಂದಿರಾ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ, ಕುಟುಂಬಶ್ರೀ ಮೆಂಟರ್ ಭವ್ಯ, ಫಾಸರುನ್ನಿಸ, ಕೌನ್ಸಿಲರ್ ಪ್ರಸೀದಾ, ಎಸ್.ಟಿ ಎನ್ಯುಮೇಟರ್ ವನಜಾ, ಗೀತಾ, ಅಕೌಂಟೆಂಟ್ ಸುನೀತಾ, ಸಿಡಿಎಸ್ ಹಾಗೂ ಕುಟುಂಬಶ್ರೀ ಸದಸ್ಯೆಯರು ಉಪಸ್ಥಿತರಿದ್ದರು. ಜುಲೈ 29 ರಂದು ಪೆರ್ಲ ಬಯಲಿನಲ್ಲಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಕುಟುಂಬಶ್ರೀ ಸದಸ್ಯೆಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಭವ್ಯ ಮೆರವಣಿಗೆಯನ್ನು ಆಯೋಜಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.




.jpg)
