ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವೇದಿಕೆಯಲ್ಲಿ ಶನಿವಾರ ಸಂಜೆ ಮಯೂರಿ ಉಪಾಧ್ಯಾಯ ನೇತೃತ್ವದಲ್ಲಿ ದಕ್ಷಯಜ್ಞ- ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಸಿಂಚನಾ ಮೂಡುಕೋಡಿ, ಬಾಲಸುಬ್ರಹ್ಮಣ್ಯ ಗುತ್ತಿಗಾರು, ಲಕ್ಷ್ಮೀಶ ಸಗ್ರಿತ್ತಾಯ ಪಂಜ ಹಾಗೂ ಮುಮ್ಮೇಳದಲ್ಲಿ ಮಯೂರಿ ಉಪಾಧ್ಯಾಯ, ಅಶ್ವಿನಿ ಕೊಂಡದಕುಳಿ, ಪ್ರೇಮಾ ಕಿಶೋರ್ ಪುತ್ತೂರು, ಉಷಾ ಬಿ.ಶೆಟ್ಟಿ ಒಡಿಯೂರು, ಪುಷ್ಪಾ ರಾಜೇಶ್, ಶ್ರುತಿ ವಿಸ್ಮಿತ್ ಬಲ್ನಾಡು, ಶಾಲಿನಿ ಅರುಣ್ ಶೆಟ್ಟಿ, ರೇಣುಕಾ, ಜ್ಯೋತಿ ಅಶೋಕ, ಪ್ರಶಕ್ತಾ ಶೆಟ್ಟಿ, ವರ್ಷಾ ಕೆ.ಟಿ, ಅಂಶಿ ಅರುಣ್ ಶೆಟ್ಟಿ ಭಾಗವಹಿಸಿದ್ದರು.




.jpg)
